# ಮೈಸೂರು ದಸರಾ ಕಂಬಳಕ್ಕೆ 182 ಕೋಣಗಳು ರಿಜಿಸ್ಟರ್

- Link: https://hosakannada.com/news/182-rooms-registered-for-mysore-dasara-kambala/
- Published: 2026-07-17T08:53:55+00:00
- Author: ಹೊಸಕನ್ನಡ ನ್ಯೂಸ್

ಮೈಸೂರು ದಸರದಲ್ಲಿ ನಡೆಯುವ ಕಂಬಳದ ಕುರಿತು ರಾಜ್ಯಾದ್ಯಂತ ಭಾರೀ ಪರ- ವಿರೋಧದ ಚರ್ಚೆಗಳು ಶುರುವಾಗಿದೆ.
ಈ ನಡುವೆ ಶಾಸಕ ಅಶೋಕ್ ಕುಮಾರ್ ರೈ ಅವರು ಏನೇ ಚರ್ಚೆಗಳು ನಡೆದರು ಕೂಡ ಮೈಸೂರಲ್ಲಿ ಈ ಬಾರಿ ಕಂಬಳ 
ನಡೆದೆ ನಡೆಯುತ್ತದೆ. ಈಗಾಗಲೇ 182 ಕೋಣಗಳು ರಿಜಿಸ್ಟರ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

Sponsored

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದ ಕೋಣಗಳನ್ನ
ಓಡಿಸುವವರು ಯಾರಿದ್ದರೋ ಅವರನ್ನ ಸಮಿತಿಗೆ ಸೇರಿಸಲಾಗಿದೆ. ಅವರ ಅಭಿಪ್ರಾಯ ಪಡೆದು ದಸರಾದಲ್ಲಿ ಭಾಗಿಯಾಗುವ
ಬಗ್ಗೆ ಒಪ್ಪಿಗೆ ಸೂಚಿಸಿದ್ದೇವೆ. ಬೆಂಗಳೂರಿನಲ್ಲೂ ಕಂಬಳಕ್ಕೆ ವಿರೋಧ ಇತ್ತು. ಆಮೇಲೆ ಕಂಟ್ರೋಲ್ ಮಾಡಲಾಗದಷ್ಟು
ಕೋಣಗಳು ಬಂದವು. ಬೆಂಗಳೂರಿನಲ್ಲಿ 175 ಕೋಣಗಳಿದ್ದವು. ಮೈಸೂರಿಗೆ ಈಗಾಗಲೇ 182 ಕೋಣಗಳು ರಿಜಿಸ್ಟರ್
ಆಗಿದೆ. ಈ ಪೈಕಿ 175 ಕೋಣಗಳನ್ನು ಆಯ್ಕೆ ಮಾಡುತ್ತೇವೆ ಎಂದರು. 

Advertisement

Advertisement

ಮೈಸೂರು ದಸರಾದಲ್ಲಿನ ಕಂಬಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾತನಾಡಿದ ಅವರು ಹಿಂದಿನ ಇತಿಹಾಸದಲ್ಲಿ
ಕೋಣಗಳಿಗೂ, ಅರಮನೆಗೂ ನಂಟಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಮೈಸೂರಿನಲ್ಲಿ ಕಂಬಳ ಆಗುತ್ತದೆ. ಸಿಎಂ
ಸೂಚನೆ ಕೊಟ್ಟ ಬಳಿಕ ಕೆಲಸ ಶುರು ಮಾಡುತ್ತೇವೆ. ಮೈಸೂರಿನಲ್ಲೂ 25 ರಿಂದ 30 ಲಕ್ಷಜನ ಸೇರುತ್ತಾರೆ 
ಎಂದು ಹೇಳಿದರು.

Advertisement
