# ಮೊಬೈಲ್ ಕೊಡಲಿಲ್ಲವೆಂದು ತಾಯಿಯ ಮೇಲೆ 10 ವರ್ಷದ ಬಾಲಕ ಭೀಕರ ಹಲ್ಲೆ – ಅಘಾತಕಾರಿ ವಿಡಿಯೋ ವೈರಲ್

- Link: https://hosakannada.com/news/10-year-old-boy-brutally-attacks-mother-for-not-giving-him-a-mobile-phone/
- Published: 2026-07-21T15:40:56+00:00
- Author: ಹೊಸಕನ್ನಡ ನ್ಯೂಸ್

ಗೇಮ್ ಆಡಲು ಮೊಬೈಲ್ ಕೊಡಲಿಲ್ಲ ಅಂತ ತಾಯಿಯ ಮೇಲೆಯೇ 10 ವರ್ಷದ ಬಾಲಕನೊಬ್ಬ ಮುಗಿಬಿದ್ದು ಹೊಡೆದಿರುವ
ಆಘಾತಕಾರಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Sponsored

ವೈರಲ್ ಆಗಿರುವ ವಿಡಿಯೋದಲ್ಲಿ ಮೊಬೈಲ್ ಪಡೆಯಲು ಯತ್ನಿಸಿದ ಬಾಲಕ, ತಾಯಿ ನಿರಾಕರಿಸಿದಾಗ ನಿಯಂತ್ರಣ
ಕಳೆದುಕೊಂಡು ಕಿರುಚಾಡುತ್ತಾ ತಾಯಿಗೆ ಹಿಂಸಿಸಲು ಮುಂದಾಗಿದ್ದಾನೆ. ತಾಯಿ ಎಷ್ಟೇ ಪ್ರತಿರೋಧ ಒಡ್ಡಿದರೂ
ಬಾಲಕ ಆಕ್ರೋಶದಿಂದ ಫೋನ್ ಕಿತ್ತುಕೊಳ್ಳಲು ಯತ್ನಿಸಿರುವ ದೃಶ್ಯಗಳು ಜಾಲತಾಣಗಳಲ್ಲಿ ತೀವ್ರ ಕಳವಳಕ್ಕೆ
ಕಾರಣವಾಗಿವೆ.

Advertisement

Advertisement

ಈ ವಿಡಿಯೋ ವೈರಲ್ ಬೆನ್ನಲ್ಲೇ ಆಧುನಿಕ ಪೋಷಕತ್ವ ಮತ್ತು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ 
ನೀಡುವ ಪರಿಣಾಮಗಳ ಕುರಿತು ಜಾಲತಾಣಗಳಲ್ಲಿ ಬಿಸಿಯೇರಿದ ಚರ್ಚೆ ಆರಂಭವಾಗಿದೆ. ಸಣ್ಣ ವಯಸ್ಸಿಗೆ ಯಾವುದೇ
ಮಿತಿಯಿಲ್ಲದೆ ಮೊಬೈಲ್ ನೀಡುವುದೇ ಇಂತಹ ಆಕ್ರಮಣಕಾರಿ ನಡವಳಿಕೆಗೆ ಕಾರಣ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

[https://x.com/SonOfBharat_88/status/2078830193201103224?ref_src=twsrc%5Etfw%7Ctwcamp%5Etweetembed%7Ctwterm%5E2078830193201103224%7Ctwgr%5E795946724b1aef654c0e613dfb2b0f769fcb5ccd%7Ctwcon%5Es1_c10&ref_url=http%3A%2F%2Fapi-news.dailyhunt.in%2F](https://x.com/SonOfBharat_88/status/2078830193201103224?ref_src=twsrc%5Etfw%7Ctwcamp%5Etweetembed%7Ctwterm%5E2078830193201103224%7Ctwgr%5E795946724b1aef654c0e613dfb2b0f769fcb5ccd%7Ctwcon%5Es1_c10&ref_url=http%3A%2F%2Fapi-news.dailyhunt.in%2F)

Advertisement
