# ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರಕಾರದಿಂದ ಜೋಡಿ ಸಿಹಿ ಸುದ್ದಿ |ಭೂ ಒಡೆತನ ಯೋಜನೆ, ಸಹಾಯಧನ, ವಸತಿ ಸಬ್ಸಿಡಿ ಹೆಚ್ಚಳ!!!

- Link: https://hosakannada.com/news/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81/sc-st-bumper-gift/
- Published: 2022-04-06T11:37:52+00:00
- Author: Mallika

ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರ್ಕಾರ ಜೋಡಿ ಸಿಹಿಸುದ್ದಿಯೊಂದನ್ನು ಪ್ರಕಟಿಸಿದೆ. ಈ ಸಮುದಾಯದ
ಬಡವರು ಭೂ ಒಡೆಯರಾಗುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ
ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸುವ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಮನೆ ನಿರ್ವಣಕ್ಕಾಗಿ
ನೀಡುವ ಸಬ್ಸಿಡಿ ಮೊತ್ತವನ್ನು 1.75 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿರುವುದಾಗಿ
ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.

Sponsored

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ
ಅವರ 115ನೇ ಜಯಂತಿ, ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಈ ಮಾತನ್ನು ಹೇಳಿದರು.

Advertisement

Advertisement

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ನೀಡುವ ಯೋಜನೆಯನ್ನು ಈ ವರ್ಷ
ಪ್ರಾರಂಭಿಸಲಾಗುವುದು. ಹಾಗೆನೇ ‘ಮುಖ್ಯಮಂತ್ರಿ ಮಾರ್ಗದರ್ಶಿನಿ’ ವೇದಿಕೆ ಮೂಲಕ 8 ರಿಂದ 12ನೇ ತರಗತಿ
ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಅಲ್ಲದೆ, ಈ ಸಮುದಾಯಗಳಿಗೆ
ನವೋದ್ಯಮದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವುದಕ್ಕಾಗಿ 50 ಲಕ್ಷ ರೂ. ಸಹಾಯಧನ ನೀಡುವ ಯೋಜನೆಯನ್ನು
ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.

Advertisement
