# ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಸಿಹಿ ಸುದ್ದಿ ನೀಡಿದ ಬಿಜೆಪಿ ಸರಕಾರ

- Link: https://hosakannada.com/news/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81/deemd-forest-house-agriculture-bjp-govt/
- Published: 2021-09-21T08:00:36+00:00
- Author: Praveen Chennavara

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಬಿಜೆಪಿ ಸರಕಾರ ಸಿಹಿ ಸುದ್ದಿ ನೀಡಿದೆ.

Sponsored

ರಾಜ್ಯದಲ್ಲಿನ ಡೀಮ್ಸ್ ಫಾರೆಸ್ಟ್ ಎಂದು ಗುರುತಿಸಲಾಗಿರುವ 9 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 6 ಲಕ್ಷ
ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು ಅರಣ್ಯ ಇಲಾಖೆ ಸಮ್ಮತಿಸಿದ್ದು, ಈ ಭೂಮಿಯಲ್ಲಿ
ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು, ಸಾಗುವಳಿ ಮಾಡುವವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು
ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Advertisement

Advertisement

ಸೋಮವಾರ ವಿಧಾನಸಭೆ ಪ್ರಶೋತ್ತರ ಅವಧಿಯಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅವರು ಕೇಳಿದ ಪ್ರಶ್ನೆಗೆ
ಉತ್ತರಿಸಿದ ಅವರು, `ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ಜನರ ಬೇಡಿಕೆ ಹಿನ್ನೆಲೆಯಲ್ಲಿ ತಮಗೆ ಇದರ ಹೊಣೆ
ಬೇಡ ಎಂದು 9 ಲಕ್ಷ ಹೆಕ್ಟೇರ್ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿ ಈ ಬಗ್ಗೆ ಸುಪ್ರೀಂಕೋಟ್‌ರ್ಗೆ
ಪ್ರಮಾಣಪತ್ರ ಸಲ್ಲಿಸಿದ್ದರು.

ಇವುಗಳ ಪೈಕಿ 6 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯಲು
ಅರಣ್ಯ ಸಚಿವರ ಜತೆ ಚರ್ಚೆ ನಡೆಸಿದ್ದು, ಅವರು ಇದಕ್ಕೆ ಸ್ಪಂದಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ 
ಭೂಮಿಯನ್ನು ಹಿಂಪಡೆದು ಸುಪ್ರೀಂಕೋಟ್‌ರ್ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಅಲ್ಲದೆ, ಈ ಜಾಗದಲ್ಲಿ
ಮನೆ ನಿರ್ಮಿಸಿಕೊಂಡು ಮತ್ತು ಸಾಗುವಳಿ ಮಾಡುವವರಿಗೆ ಜಾಗ ನೀಡಲಾಗುವುದು ಎಂದರು.

> [ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಯುವತಿ ಹಾಗೂ ಇಬ್ಬರು ಯುವಕರಿದ್ದ ಪ್ರಕರಣ | ಯುವತಿಯಿಂದ ಐವರ ವಿರುದ್ದ ದೂರು,ಇಬ್ಬರ ಬಂಧನ](https://hosakannada.com/news/puttur-girl-and-boy-news/)

Advertisement
