# ಉಡುಪಿ :ಬಾಲಕಿಯ ಮೇಲೆ ಸಂಬಂಧಿಕ ಯುವಕರಿಂದ ಲೈಂಗಿಕ ದೌರ್ಜನ್ಯ ,ಆರೋಪಿಗಳ ಬಂಧನ

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/udupi-news-harassment/
- Published: 2021-11-22T19:17:44+00:00
- Author: Praveen Chennavara

ಉಡುಪಿ : ಎಂಟು ವರ್ಷದ ಬಾಲಕಿಯ ಮೇಲೆ ಇಬ್ಬರು ಸಂಬಂಧಿಕರು ನಿರಂತರವಾಗಿ ಎರಡು ತಿಂಗಳು ಲೈಂಗಿಕ ದೌರ್ಜನ್ಯವೆಸಗಿದ
ಘಟನೆ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು,ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿಗಳಾದ ಸಂದೀಪ್ ನಾಯ್ಕ ಹಾಗೂ ವಿಜೇಶ್ ನಾಯ್ಕ
ಅವರನ್ನು ಪೊಲೀಸರು ಬಂಧಿಸಿದ್ದಾರೆ.

Sponsored

ಸಂದೀಪ್ ನಾಯ್ಕ ವಿವಾಹಿತ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಮತ್ತೊಂದು ಆರೋಪಿಯೂ ಸಣ್ಣಪಟ್ಟ ಕೆಲಸಗಳನ್ನು
ಸ್ಥಳೀಯವಾಗಿ ಮಾಡುತ್ತಿದ್ದ ಈ ಇಬ್ಬರೂ ಆರೋಪಿಗಳ ಮೇಲೆ ಈ ಹಿಂದೆಯೂ ಆರೋಪ ಸ್ಥಳೀಯವಾಗಿ ಕೇಳಿಬಂದಿತ್ತು.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆಂದು ಮನೆಯಿಂದ
ಬೆಳಿಗ್ಗೆ ಹೋಗಿ ರಾತ್ರಿ ಮರಳುತ್ತಿದ್ದರು.

Advertisement

Advertisement

ತಂದೆ-ತಾಯಿ ಇಲ್ಲದ ವೇಳೆಯಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಸಮಯದಲ್ಲಿ ಆರೋಪಿತ ಸಂಬಂಧಿತ
ಯುವಕರಾದ ಸಂದೀಪ್,ವಿಘ್ನೇಶ್ ಅವರು ಬಾಲಕಿಯಲ್ಲಿ ತಂದೆ, ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿ ನಿರಂತರ
ದೌರ್ಜನ್ಯ ಮಾಡಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

Advertisement
