# ಉಡುಪಿ | ‘MBBS’ ಕೂಡಾ ಕುಡಿದು ಬೀದಿ ಗಲಾಟೆ ಮಾಡಿಕೊಳ್ಳಲು ಶುರುಮಾಡಿದೆ | ವಿದ್ಯಾರ್ಥಿನಿ ಸೇರಿ ಮೂವರು ವೈದ್ಯ ವಿದ್ಯಾರ್ಥಿಗಳ ಸ್ಟ್ರೀಟ್ ಫೈಟ್

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/udupi-mbbs-students-and-drinks-ans-fight/
- Published: 2022-01-08T12:53:54+00:00
- Author: ಹೊಸಕನ್ನಡ ನ್ಯೂಸ್

ಉಡುಪಿ : ಮದ್ಯ ಸೇವಿಸಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ
ಹೊಡೆದಾಡಿಕೊಂಡಿರುವ ಘಟನೆಯೊಂದು ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ.

Sponsored

![](https://hosakannada.com/wp-content/uploads/2022/01/IMG-20220108-WA0024.jpg)

Advertisement

Advertisement

ಒಂದೇ ಸ್ಕೂಟರ್ ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಮಾರ್ಗ
ಮಧ್ಯದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಈ ಕಾರಣಕ್ಕೆ ಪರಸ್ಪರ ವಾಗ್ವಾದ ನಡೆದು ಬಳಿಕ ಹೊಡೆದಾಟ ಕೂಡ 
ಮಾಡಿಕೊಂಡಿದ್ದಾರೆ. ಇವರ ಈ ಬೀದಿಕಾಳಗದಿಂದ ಬೇಸತ್ತು ಸಾರ್ವಜನಿಕರು ಬಿಡಿಸಲು ಹೋದರೂ ಪ್ರಯೋಜನವಾಗಲಿಲ್ಲ.

ನಂತರ ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಅವರುಗಳನ್ನು
ವಶಕ್ಕೆ‌ ಪಡೆದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗಿದೆ.

ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳು ಪೊಲೀಸರೊಂದಿಗೂ ವಾಗ್ವಾದಕ್ಕಿಳಿದಿದ್ದಾರೆ.

Advertisement
