# ಪ್ಯಾಂಟ್ ನ ಜಿಪ್ಪು ಸಡಿಲಿಸಿ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನಿಗೆ ವಿದ್ಯಾರ್ಥಿನಿಯರಿಂದ ಗೂಸಾ..!!

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/bus-conductor-and-fight/
- Published: 2021-11-07T07:51:15+00:00
- Author: ಹೊಸಕನ್ನಡ ನ್ಯೂಸ್

ಉಡುಪಿ : ಕಾಲೇಜಿನ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನೊರ್ವನಿಗೆ
ವಿದ್ಯಾರ್ಥಿನಿಯರೇ ಗೂಸ ಕೊಟ್ಟು ಕಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

Sponsored

ಉಡುಪಿ ಜಿಲ್ಲೆಯ ಹೆಬ್ರಿಯ ಹೆಸರಾಂತ ಖಾಸಗಿ ಬಸ್‌ನ‌ ಕಂಡಕ್ಟರ್ ಉಪೇಂದ್ರ ಎನ್ನುವಾತ ಉಡುಪಿ ಸಂತೆಕಟ್ಟೆಯ
ನರ್ಸಿಂಗ್ ಕಾಲೇಜ್ ಬಳಿ ಬರುತ್ತಿದ್ದ. ಅಲ್ಲಿ ತನಕ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ
ಪ್ಯಾಂಟ್ ಜಿಪ್ ಸಡಿಲಿಸಿ  ಗುಪ್ತಾಂಗ ಎಳೆದು ತೋರಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಕೈಸನ್ನೆ, ಕಣ್ಣ್
ಸನ್ನೆ ಮಾಡುತ್ತ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂಬ ದೂರು ಕೂಡ ಬಂದಿತ್ತು.

Advertisement

Advertisement

![](https://hosakannada.com/wp-content/uploads/2021/11/IMG-20211107-WA0030.jpg)

ನಿನ್ನೆ ಆತನು, ಕಾಲೇಜ್‌ನ ಮುಖ್ಯಸ್ಥರು, ವಿದ್ಯಾರ್ಥಿನಿಯರು ಹೀಗೆ ಎಲ್ಲರೂ ಇರುವಾಗಲೇ ತನ್ನ ವರ್ತನೆ
ತೋರಿಸುತ್ತಿದ್ದಂತೆ ಕಾಲೇಜ್‌ನ ಸಿಬ್ಬಂದಿಗಳು, ವಿದ್ಯಾರ್ಥಿನಿಗಳು ಬಸ್ ಕಂಡಕ್ಟರ್‌ನ‌ ಅಟ್ಟಾಡಿಸಿಕೊಂಡು
ಹೋಗಿ ಗೂಸಾ ಕೊಟ್ಟಿದ್ದರು. ಅಲ್ಲಿಂದ ಹೇಗೋ ಎದ್ನೋ ಬಿದ್ನೋ ಎಂದು ತಪ್ಪಿಸಿಕೊಂಡು ಓಡಿದ್ದ ಉಪೇಂದ್ರ.
ನಂತರ ಸದರಿ ಕಾಲೇಜ್‌ನಿಂದ ತೆಂಕನಿಡಿಯೂರ್ ಕಡೆ ಓಡುತ್ತಿದ್ದ ಈತನ ನಡತೆ ಕಂಡು ಅನುಮಾನಗೊಂಡು ಸ್ಥಳೀಯರ
ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲಿ ಆತನನ್ನು ಹಿಡಿದು ಬಾಯಿ ಬಿಡಿಸಿದಾಗ ಘಟನೆ ವಿವರಿಸುತ್ತಿದ್ದಂತೆ
ಅಲ್ಲಿಂದ ಮತ್ತೆ ನೇರ ಕಾಲೇಜ್‌ಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಕೈಗೆ‌ ಕಂಡಕ್ಟರ್‌ನನ್ನು 
ಒಪ್ಪಿಸಿದ್ದಾರೆ. ದಿನ ನಿತ್ಯ ಕಿರುಕುಳ ನೀಡುತ್ತಿದ್ದವನು ಈತನೇ ಎಂದು ಮತ್ತೆ ಉಪೇಂದ್ರನನ್ನು ಹಣ್ಣುಗಾಯಿ
ನೀರುಗಾಯಿ ಮಾಡಿದ್ದ ನರ್ಸಿಂಗ್ ಕಾಲೇಜ್‌ನ ವಿದ್ಯಾರ್ಥಿನಿಯರು, ಬಳಿಕ ಉಡುಪಿ ನಗರ ಠಾಣಾ ಪೊಲೀಸರಿಗೆ
ಮಾಹಿತಿ ನೀಡಿದ್ದಾರೆ. ಸದ್ಯ ಕಾಮುಕ ಬಸ್ ಕಂಡಕ್ಟರ್ ಪೊಲೀಸರ ಕೈಲಿದ್ದಾನೆ ಎಂದು ತಿಳಿದು ಬಂದಿದೆ.

Advertisement
