# ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಎರಡೂವರೆ ವರ್ಷದ ಮಗು

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/baby-falls-down-from-hands/
- Published: 2022-05-19T15:11:50+00:00
- Author: ಹೊಸಕನ್ನಡ ನ್ಯೂಸ್

ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಘಟನೆ ಹೆಬ್ರಿ ತಾಲೂಕಿನಲ್ಲಿ
ನಡೆದಿದೆ.

Sponsored

ಗಾಯಗೊಂಡ ಮಗುವನ್ನು ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಶಕುಂತಲಾ ಹಾಗೂ ಕೃಷ್ಣ ದಂಪತಿಗಳು ಎರಡೂವರೆ
ವರ್ಷ ಪ್ರಾಯದ ಮಗು ಸಾಕ್ಷಿ ಎಂದು ಗುರುತಿಸಲಾಗಿದೆ.

Advertisement

Advertisement

ದಂಪತಿಗಳಿಗೆ ಎರಡೂವರೆ ವರ್ಷ ಪ್ರಾಯದ ಸಾಕ್ಷಿ ಹಾಗೂ 6 ತಿಂಗಳ ಹೆಣ್ಣು ಮಗುವಿದ್ದು , ಜನತಾ ಕಾಲೋನಿ
ಎಂಬಲ್ಲಿ ವಾಸವಾಗಿದ್ದರು. ಮೇ.17ರಂದು ಕಾರ್ಯಕ್ರಮವೊಂದರ ನಿಮಿತ್ತ ಇವರ ಮನೆಗೆ ಸಂಬಂಧಿ ರಾಜು ಎಂಬುವವರು
ಬಂದಿದ್ದರು. ಇವರು ರಾತ್ರಿ 8:00 ಗಂಟೆಗೆ ಮನೆಯ ಛಾವಡಿಯಲ್ಲಿ ಸಾಕ್ಷಿಯನ್ನು ಎತ್ತಿ ಆಡಿಸುತ್ತಿದ್ದರು.

ಈ ವೇಳೆ ಏಕಾಏಕಿ ಕೈಯಿಂದ ಜಾರಿದ ಮಗು ನೆಲಕ್ಕೆ ಬಿದ್ದಿದ್ದು, ಮಗುವಿನ ಎಡಕಿವಿಯ ಬಳಿ ತೀವ್ರವಾದ ಗಾಯವಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
