# Delhi: ಹಣ ಪತ್ತೆ ಪ್ರಕರಣ: ನ್ಯಾಯಾಧೀಶ ವರ್ಮಾ ವಾಗ್ದಂಡನೆಗೆ ಸಿಜೆಐ ನ್ಯಾ.ಖನ್ನಾ ಶಿಫಾರಸು

- Link: https://hosakannada.com/national/money-laundering-case-cji-justice-khanna-recommends-impeachment-of-judge-verma/
- Published: 2025-05-09T08:15:42+00:00
- Author: ಹೊಸಕನ್ನಡ ನ್ಯೂಸ್

Delhi: ಈ ಹಿಂದೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಈಗಿನ ಅಲಹಾ ಬಾದ್ ಹೈಕೋರ್ಟ್ ಜಡ್ಜ್‌ ಯಶವಂತ್
ವರ್ಮಾ ಅವರ ದಿಲ್ಲಿ ಮನೆಯಲ್ಲಿ ಅಪಾರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ವಾಗ್ದಂಡನೆಗೆ
ಗುರಿಪಡಿ ಸುಪ್ರೀಂನ ಸಿಜೆ ಶಿಫಾರಸು ಮಾಡಿದ್ದಾರೆ.

Sponsored

ನ್ಯಾ| ವರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ನೇಮಿತ ತನಿಖಾ ಸಂಸ್ಥೆ ನೀಡಿರುವ ವರದಿಯನ್ನು ಸಿಜೆಐ ನ್ಯಾ।
ಸಂಜೀವ್ ಖನ್ನಾ ರಾಷ್ಟ್ರಪತಿ ದೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದು,
ವಾಗ್ದಂಡನೆಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

Advertisement

Advertisement

ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿ ನ್ಯಾ| ವರ್ಮಾ ನಿವಾಸದಲ್ಲಿ 
ಹಣ ಪತ್ತೆಯಾಗಿರುವುದು ದೃಢ ಎಂದು ವರದಿ ಸಲ್ಲಿಸಿತ್ತು. ಈ ಬೆನ್ನಲ್ಲೇ ಸಿಜೆಐ ಖನ್ನಾ ಮೋದಿ, ಮುರ್ಮು
ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವರದಿಯ ಜೊತೆಗೆ ತಮ್ಮ ಪ್ರತಿಕ್ರಿಯೆ ಹಾಗೂ ನಾ| ವರ್ಮಾ 
ಉತ್ತರವನ್ನೂ ಹಂಚಿಕೊಂಡಿದ್ದಾರೆ.

ಇದರಲ್ಲಿ, ರಾಜೀನಾಮೆ ನೀಡುವಂತೆ ನೀಡಿದ ಸಲಹೆಯನ್ನು ನ್ಯಾ| ವರ್ಮಾ ಪಾಲಿಸದ ಹಿನ್ನೆಲೆಯಲ್ಲಿ ಅವರನ್ನು
ವಾಗ್ದಂಡನೆ ಮಾಡುವಂತೆ ಪತ್ರದಲ್ಲಿ ಸಿಜೆಐ ಅವರು ಉಲ್ಲೇಖಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement
