# ವಾಣಿ ಸ್ನಾಕ್ಸ್ ಸ್ಟ್ರೀಟ್ – ಸೀಸನ್ 2ಕ್ಕೆ ಅದ್ಧೂರಿ ಚಾಲನೆ

- Link: https://hosakannada.com/latest/vani-snacks-street-grand-launch-of-season-2/
- Published: 2026-11-07T10:12:26+00:00
- Author: ಹೊಸಕನ್ನಡ ನ್ಯೂಸ್

**33ರಿಂದ 43 ಮಳಿಗೆಗಳಿಗೆ ಏರಿಕೆ: ವಿದ್ಯಾರ್ಥಿಗಳ ಉದ್ಯಮಶೀಲತೆಗೆ ವೇದಿಕೆ**

Sponsored

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಹಳೆಕೋಟೆ, ಬೆಳ್ತಂಗಡಿ ವತಿಯಿಂದ ಆಯೋಜಿಸಲಾದ “ವಾಣಿ ಸ್ನಾಕ್ಸ್
ಸ್ಟ್ರೀಟ್ – ಸೀಸನ್ 2” ಕಾರ್ಯಕ್ರಮಕ್ಕೆ ಸುದ್ದಿ ಮೀಡಿಯಾದ ಮುಖ್ಯಸ್ಥರಾದ ದಾಮೋದರ ದೊಂಡೋಲೆ ಅವರು
ಚಾಲನೆ ನೀಡಿದರು.

Advertisement

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ಅವರು
ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ರಾಜೇಶ್ ಪ್ರಭು ಭಾಗವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ
ಕಾರ್ಯದರ್ಶಿ ಗಣೇಶ್ ಗೌಡ, ವಾಣಿ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ., ಪ್ರಾಂಶುಪಾಲ
ವಿಷ್ಣು ಪ್ರಕಾಶ್ ಎಂ., ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.

ಕಳೆದ ವರ್ಷ 33 ಮಳಿಗೆಗಳೊಂದಿಗೆ ಯಶಸ್ವಿಯಾಗಿ ನಡೆದಿದ್ದ ಸ್ನಾಕ್ಸ್ ಸ್ಟ್ರೀಟ್ ಈ ಬಾರಿ ಸೀಸನ್ 2ರಲ್ಲಿ
43 ಮಳಿಗೆಗಳೊಂದಿಗೆ ಮತ್ತಷ್ಟು ವಿಸ್ತಾರಗೊಂಡಿದೆ. ಕಳೆದ ಬಾರಿಗಿಂತ 10 ಹೆಚ್ಚುವರಿ ಮಳಿಗೆಗಳು ಸೇರ್ಪಡೆಯಾಗಿರುವುದು
ಕಾರ್ಯಕ್ರಮದ ಜನಪ್ರಿಯತೆ ಮತ್ತು ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರತಿಬಿಂಬಿಸಿದೆ.

ವಿದ್ಯಾರ್ಥಿಗಳು ತಮ್ಮದೇ ತಂಡಗಳನ್ನು ರಚಿಸಿಕೊಂಡು ಬಂಡವಾಳ ಹೂಡಿಕೆ, ಆಹಾರ ಉತ್ಪನ್ನಗಳ ತಯಾರಿ, ಮಳಿಗೆ
ನಿರ್ವಹಣೆ, ಉತ್ಪನ್ನಗಳ ಮಾರಾಟ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಅನುಭವವನ್ನು ಪಡೆದುಕೊಂಡರು. 
ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮ ಸೃಜನಶೀಲತೆ
ಹಾಗೂ ಸಂಘಟನಾ ಕೌಶಲ್ಯವನ್ನು ಪ್ರದರ್ಶಿಸಿದರು.

ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ನೈಜ ಉದ್ಯಮದ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು
ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಬಂಡವಾಳ ನಿರ್ವಹಣೆ, ಮಾರುಕಟ್ಟೆ ತಂತ್ರ, ಗ್ರಾಹಕ ಸೇವೆ, 
ತಂಡದ ಕಾರ್ಯನಿರ್ವಹಣೆ ಹಾಗೂ ಲಾಭ-ನಷ್ಟದ ಅರಿವನ್ನು ಪ್ರಾಯೋಗಿಕವಾಗಿ ಕಲಿಯಲು ಈ ಕಾರ್ಯಕ್ರಮ ಉತ್ತಮ
ವೇದಿಕೆಯಾಯಿತು.

“33ರಿಂದ 43 ಮಳಿಗೆಗಳಿಗೆ – ವಾಣಿ ಸ್ನಾಕ್ಸ್ ಸ್ಟ್ರೀಟ್‌ನ ಬೆಳವಣಿಗೆಯ ಪಯಣ” ವಿದ್ಯಾರ್ಥಿಗಳ ಪ್ರತಿಭೆ,
ಆಸಕ್ತಿ ಮತ್ತು ಉದ್ಯಮಶೀಲ ಮನೋಭಾವಕ್ಕೆ ಸಾಕ್ಷಿಯಾಯಿತು. ಶಿಕ್ಷಣದೊಂದಿಗೆ ಜೀವನ ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು
ಬೆಸೆಯುವ ವಾಣಿ ಶಿಕ್ಷಣ ಸಂಸ್ಥೆಗಳ ಈ ವಿನೂತನ ಪ್ರಯತ್ನವು ಗಮನ ಸೆಳೆಯಿತು.

Advertisement
