# Accident: ಓಮ್ನಿ – ಜೀಪ್ ನಡುವೆ ಭೀಕರ ಅಪಘಾತ; ಇಬ್ಬರು ಸಾವು; ಕಾರು ಫುಲ್ ಜಖಂ!!

- Link: https://hosakannada.com/latest/two-people-died-in-a-terrible-accident-between-an-omni-and-a-jeep/
- Published: 2024-01-18T11:06:59+00:00
- Author: ಕೆ. ಎಸ್. ರೂಪಾ

Accident: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಸಮೀಪದಲ್ಲಿ ಬುಧವಾರ ಮಾರುತಿ ಓಮ್ಮಿ
ಮತ್ತು ಬೊಲೆರೋ ಜೀಪ್ ನಡುವೆ ಭೀಕರ ಅವಘಡ (Accident)ಸಂಭವಿಸಿದ್ದು, ಈ ಸಂದರ್ಭ ತಂದೆ ಮತ್ತು ಮಗಳು
ಮೃತಪಟ್ಟಿರುವ ಘಟನೆ ವರದಿಯಾಗಿದೆ.

Sponsored

**ಇದನ್ನೂ ಓದಿ: [Elephant Attack: ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ, ಅಟ್ಟಾಡಿಸಿದ ಆನೆ; ಮಹಿಳೆ ಮೃತ!!](https://hosakannada.com/2024/01/18/elephant-attack-death-news-woman-has-been-killed-by-a-wild-elephant-attack/)**

Advertisement

Advertisement

ಓಮ್ಮಿ ವಾಹನಕ್ಕೆ ಬೋಯಿಕೇರಿಗೆ ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿರಿಯಾಪಟ್ಟಣ ತಾಲೂಕಿನ
ಚನಕಲ್ ಕಾವಲ್‌ನ ಬೊಲೆರೋ ಜೀಪ್ ಢಿಕ್ಕಿಯಾಗಿದ್ದು, ಈ ಸಂದರ್ಭ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತಪಟ್ಟವರನ್ನು ಓಮ್ಮಿ ಚಲಾಯಿಸುತ್ತಿದ್ದ ಮಾಜಿ ಯೋಧರಾದ ಬಸವನಹಳ್ಳಿ ನಿವಾಸಿ ರಾಜೇಶ್ ದೇವಯ್ಯ (38)
ಮತ್ತು ಅವರ ಪುತ್ರಿ ನ್ಯಾನ್ಸಿ ಬೊಳ್ಳಮ್ಮ (3) ಎಂದು ಗುರುತಿಸಲಾಗಿದೆ.

**ಇದನ್ನೂ ಓದಿ: [Adhar card: ಆಧಾರ್ ಕಾರ್ಡ್ ವಿಚಾರದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ- ಇನ್ಮುಂದೆ ಈ ಕೆಲಸಕ್ಕೆ ಆಧಾರ್ ದಾಖಲೆಯಲ್ಲ !!](https://hosakannada.com/2024/01/18/karnataka-government-news-government-has-made-a-significant-change-in-the-aadhaar-card/)**

ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನ್ಯಾನ್ಸಿ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ
ತಿಳಿದು ಬಂದಿದೆ. ಈ ಅವಘಡದ ಪರಿಣಾಮ ಡಿಕ್ಕಿಯ ರಭಸಕ್ಕೆ ಓಮ್ಮಿ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು
ತಿಳಿದು ಬಂದಿದೆ.ಬೊಲೆರೋ ಚಾಲಕ ಅರುಣ್, ಕಾರ್ಮಿಕ ಮಹಿಳೆಯರಾದ ಜಯಲಕ್ಷ್ಮೀ ಹಾಗೂ ನೀಲಮ್ಮ ಅವರಿಗೂ 
ಗಂಭೀರ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
