# ಸೆ.18 ರಂದು ತುಳು ದಿನ ಆಚರಣೆ: ಸಚಿವ ಯು ಟಿ ಖಾದರ್‌ ಘೋಷಣೆ

- Link: https://hosakannada.com/latest/tulu-day-celebration-on-sept-18-minister-u-t-khader-announces/
- Published: 2026-11-01T09:44:55+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ
ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿ ದಿನವಾದ ಸೆ.18ರಂದು ಪ್ರತಿವರ್ಷ ‘ತುಳು ದಿನ’ (ತುಳು ದಿವಸ)ವನ್ನಾಗಿ
ಎಂದು ಆಚರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ
ಸಚಿವ ಯು.ಟಿ. ಖಾದರ್ ಘೋಷಿಸಿದರು.

Sponsored

ನೆಹರು ಮೈದಾನದಲ್ಲಿ ರವಿವಾರ(ನ.1) ನಡೆದ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ
ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿಗೆ
ದ.ಕ. ಮತ್ತು ಉಡುಪಿ ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡುವ
ಮೂಲಕ ಈ ಭಾಗದ ಜನರ ಹಲವು ದಶಕಗಳ ಬೇಡಿಕೆ ಈಡೇರಿದೆ. ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ
ಪ್ರಕ್ರಿಯೆಗೆ ಇದು ಸಹಕಾರಿಯಾಗಿದೆ. ತುಳುವಿಗೆ ಅಧಿಕೃತ ಸ್ಥಾನ ಸಿಗಬೇಕು ಎಂಬ ತುಳುವರ ಬಹುಕಾಲದ ಬೇಡಿಕೆಯು
ಈಡೇರಿದಂತಾಗಿದೆ ಎಂದು ತಿಳಿಸಿದರು.

Advertisement

Advertisement

Advertisement
