# UTS: ಮಾರ್ಚ್ 1ರಿಂದ ಈ ರೈಲ್ವೆ ಬುಕಿಂಗ್ ಆಪ್ ಸ್ಥಗಿತ!!

- Link: https://hosakannada.com/latest/this-railway-booking-app-has-been-discontinued-from-march-1st/
- Published: 2026-02-10T23:55:48+00:00
- Author: ಹೊಸಕನ್ನಡ ನ್ಯೂಸ್

UTS: ಮಾರ್ಚ್ ಒಂದರಿಂದ ರೈಲ್ವೇ ಟಿಕೆಟ್ ಬುಕಿಂಗ್  UTS ಆಯಪ್ ಸ್ಥಗಿತವಾಗಲಿದೆ. ಹಳೆಯ ಆಯಪ್ ಕೆಲಸ
ಮಾಡುವುದಿಲ್ಲ, ಹೀಗಾಗಿ ಪ್ರಯಾಣಿಕರು ಆದಷ್ಟು ಬೇಗ ಆಯಪ್ ಬದಲಿಸಿಕೊಳ್ಳಬೇಕಾಗಿದೆ ಇಂದು ಭಾರತೀಯ ರೈಲ್ವೆ
ಇಲಾಖೆ ತಿಳಿಸಿದೆ.

Sponsored

ಯಸ್, ರೈಲ್ವೆ ಟಿಕೆಟ್ ಗಳನ್ನು ಬುಕ್ ಮಾಡಲು ಭಾರತೀಯ ರೈಲ್ವೆ ಇಲಾಖೆಯು ಕೆಲವು ಆಪ್ ಗಳನ್ನು ಪರಿಚಯಿಸಿದೆ.
ಅದರಲ್ಲಿ UTS ಕೂಡ ಒಂದು. Unreserved Ticketing System ಆಯಪ್ ಮೂಲಕವೂ ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನು
ಬುಕ್ ಮಾಡುವ ಸೌಲಭ್ಯವಿತ್ತು. ಆದರೆ, ಮಾರ್ಚ್ 1 ರಿಂದ ಈ UTS ಆಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು
ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಿಸಿದೆ.

Advertisement

Advertisement

ಈ ಬಗ್ಗೆ ದಕ್ಷಿಣ ರೈಲ್ವೆ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ‘ಮೊಬೈಲ್‌ನಲ್ಲಿನ UTS ಸೇವೆಯನ್ನು
ಮಾರ್ಚ್ 1 ರಿಂದ ನಿಲ್ಲಿಸಲಾಗುವುದು. ನಿಮ್ಮ ದೈನಂದಿನ ಟಿಕೆಟ್ ಅಗತ್ಯಗಳಿಗಾಗಿ ‘RailOne’ ಆಯಪ್‌ಗೆ
ಬದಲಾಯಿಸಿಕೊಳ್ಳಿ. ಅಡೆತಡೆಯಿಲ್ಲದ ಪ್ರಯಾಣಕ್ಕಾಗಿ RailOne ಡೌನ್‌ಲೋಡ್ ಮಾಡಿ’ ಎಂದು ಹೇಳಿದೆ. 

ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ಕಡೆ ನೀಡಲು ಭಾರತೀಯ ರೈಲ್ವೆ ಈ ‘ರೇಲ್ ಒನ್’ ಆಯಪ್ ತಂದಿದೆ. 
ಈ ‘ರೇಲ್ ಒನ್’ ಆಯಪ್ ಮೂಲಕ ರಿಸರ್ವ್ಡ್, ಅನ್‌ರಿಸರ್ವ್ಡ್, ಪ್ಲಾಟ್‌ಫಾರ್ಮ್ ಮತ್ತು ಸೀಸನ್ ಟಿಕೆಟ್‌ಗಳನ್ನು
ಬುಕ್ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಟಿಕೆಟ್‌ನ PNR ಸ್ಟೇಟಸ್, ಕೋಚ್ ಪೊಸಿಷನ್ (ಬೋಗಿಯ ಸ್ಥಾನ)
ಮತ್ತು ‘ಸ್ಪಾಟ್ ಯುವರ್ ಟ್ರೈನ್’ (ರೈಲು ಎಲ್ಲಿದೆ ಎಂದು ತಿಳಿಯುವುದು) ನಂತಹ ಸೌಲಭ್ಯಗಳೂ ಇವೆ. ಇದರ
ಜೊತೆಗೆ ಊಟವನ್ನೂ ಆರ್ಡರ್ ಮಾಡಬಹುದು

Advertisement
