# ಬಿನ್‌ಲಾಡೆನ್‌ ಮುಗಿಸಲು ನೆರವಾದ ಬೆಲ್ಜಿಯಂ ನಾಯಿಗಳು ಈಗ ಮುಂಬೈ ಶ್ವಾನದಳ ಸೇರ್ಪಡೆ

- Link: https://hosakannada.com/latest/the-belgian-dogs-helped-take-down-bin-laden-have-now-joined-the-mumbai-canine-squad/
- Published: 2026-10-29T08:46:27+00:00
- Author: ಹೊಸಕನ್ನಡ ನ್ಯೂಸ್

ಅಮೆರಿಕದ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಕುಖ್ಯಾತ ಉಗ್ರ ಒಸಾಮಾ ಬಿನ್ 
ಲಾಡೆನ್ ಬಚ್ಚಿಟ್ಟುಕೊಂಡಿದ್ದ ಜಾಗವನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾಗತಿಕ ಖ್ಯಾತಿಯ‘
ಬೆಲ್ಜಿಯನ್ ಮಾಲಿನೋಯ್ಸ್’ ಶ್ವಾನಗಳು ಈಗ ಮುಂಬೈ ಪೊಲೀಸ್ ಶ್ವಾನ ದಳಕ್ಕೆ ಸೇರ್ಪಡೆಗೊಂಡಿವೆ.
​ಅತಿ
ಹೆಚ್ಚು ಚುರುಕುತನ, ಅಪಾರ ಸಹನೆ, ಆಜ್ಞೆಗಳನ್ನು ತಕ್ಷಣವೇ ಗ್ರಹಿಸುವ ಶಕ್ತಿ ಮತ್ತು ದೀರ್ಘಕಾಲದವರೆಗೆ
ಶೋಧ ಕಾರ್ಯ ನಡೆಸುವ ಸಾಮರ್ಥ್ಯಕ್ಕೆ ಈ ತಳಿ ಹೆಸರುವಾಸಿಯಾಗಿದೆ. ಮುಂಬೈ ಪೊಲೀಸ್ ಇಲಾಖೆಯು ವಿಐಪಿ 
ಭದ್ರತೆ, ಸಾರ್ವಜನಿಕ ಸಮಾರಂಭಗಳು ಹಾಗೂ ಸ್ಫೋಟಕ ವಸ್ತುಗಳ ಪತ್ತೆ ಹಚ್ಚುವ ಕಾರ್ಯಕ್ಕಾಗಿ ಈ ಅತ್ಯಾಧುನಿಕ
ಶ್ವಾನಗಳನ್ನು ತನ್ನ ದಳಕ್ಕೆ ಅಧಿಕೃತವಾಗಿ ಸೇರಿಸಿಕೊಂಡಿದೆ.

Sponsored

​ಮುಂಬೈ ಪೊಲೀಸ್ ಪಡೆಗೆ ಬಲ: ಕೇವಲ ಅಪರಾಧಗಳ ತನಿಖೆ ಮಾತ್ರವಲ್ಲದೆ, ಯಾವುದೇ ಸಂಭಾವ್ಯ ಅಪಾಯ ಅಥವಾ
ಬೆದರಿಕೆಗಳನ್ನು ಮೊದಲೇ ಗುರುತಿಸಲು ಈ ಶ್ವಾನಗಳು ಪೊಲೀಸ್ ಪಡೆಗೆ ಹೆಚ್ಚಿನ ಆಯಕಟ್ಟಿನ ಬಲವನ್ನು ತುಂಬಲಿವೆ.

Advertisement

Advertisement

​ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರರ ಬೇಟೆಗೆ ಹೆಸರುವಾಸಿಯಾದ ಈ ನಾಯಿಗಳು ಈಗ ನಮ್ಮ ದೇಶದ ಪ್ರಮುಖ
ನಗರಗಳ ಪೊಲೀಸ್ ಮತ್ತು ಭದ್ರತಾ ಪಡೆಗಳ ಪ್ರಮುಖ ಭಾಗವಾಗುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

Advertisement
