# ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ: ಆದರೆ ಕಂಡಿಷನ್ಸ್‌ ಅಪ್ಲೈ

- Link: https://hosakannada.com/latest/supreme-allows-green-crackers-to-be-burst-in-delhi-but-conditions-apply/
- Published: 2026-11-02T14:33:32+00:00
- Author: ಹೊಸಕನ್ನಡ ನ್ಯೂಸ್

ದೀಪಾವಳಿ ಹಬ್ಬಕ್ಕೆ ದೆಹಲಿ ಮತ್ತು ಎನ್‌ಸಿಆರ್‌ ವಲಯದಲ್ಲಿ ನವೆಂಬರ್‌ 7,8 ರಂದು ಹಸಿರು ಪಟಾಕಿಯನ್ನು
ಮಾತ್ರ ಸಿಡಿಸಬಹುದು. ನವೆಂಬರ್‌ 9 ರಿಂದ ಮತ್ತೆ ಮೊದಲಿನ ನಿರ್ಬಂಧ ಜಾರಿಯಲ್ಲಿ ಇರಲಿದೆ ಎಂದು ಸುಪ್ರೀಂಕೋರ್ಟ್‌
ಹೇಳಿದೆ.

Sponsored

ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 8 ರಿಂದ 10 ರವರೆಗೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದೆ.
ಉಳಿದ ಸಮಯದಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಬಳಕೆ ಮಾಡುವಂತಿಲ್ಲ ಎಂದು ಕೋರ್ಟ್‌ ಖಡಕ್ಕಾಗಿ ಸೂಚಿಸಿದೆ.

Advertisement

Advertisement

ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು
ಮತ್ತು ನಿಗದಿಪಡಿಸಿದ ʼಶಾಂತ ವಲಯʼ ಗಳ 300 ಮೀಟರ್‌ ವ್ಯಾಪ್ತಿಯಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು
ನ್ಯಾಯಪೀಠ ನಿಷೇಧ ಮಾಡಿದೆ.

ನಿಗದಿ ಮಾಡಿದ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪಟಾಕಿಗಳ ಮಾರಾಟ ಮಾಡುವಂತಿಲ್ಲ
ಎಂದು ಕಟ್ಟುನಿಟ್ಟಿನ ಆದೇಶದ ಮಾಡಿದೆ.

ಸರಪಳಿಯಂತೆ ಸುತ್ತಿದ ಪಟಾಕಿಗಳು ಮತ್ತು ಹೂಮಾಲೆ ಮಾದರಿಯ ಪಟಾಕಿಗಳು, ಬೇರಿಯಮ್‌ ಅಂಶವನ್ನು ಹೊಂದಿರುವ
ಪಟಾಕಿಗಳು ಮತ್ತು ಸಿಎಸ್‌ಐಆರ್‌ ನೀರಿ ಸಂಸ್ಥೆಯಿಂದ ʼಹಸಿರು ಪಟಾಕಿʼ ಗಳೆಂದು ಅನುಮೋದನೆ ಪಡೆಯದ ಪಟಾಕಿಗಳ
ಮಾರಾಟ ಮತ್ತು ಬಳಕೆಗೆ ಅನುಮತಿ ಇಲ್ಲ ಎಂದು ಪೀಠವು ಪುನರುಚ್ಛಿಸಿದೆ.

Advertisement
