# ದೀಪಾವಳಿ ಸಂಭ್ರಮಕ್ಕೆ ಸ್ಪೆಷಲ್ ಕೊಡುಗೆ: ನೂರೇ ರೂಪಾಯಿಗೆ ಕೈಗೆಟುಕುವ ದರದಲ್ಲಿ ತರಕಾರಿ ಭಾಗ್ಯ!

- Link: https://hosakannada.com/latest/special-offer-for-diwali-celebrations-vegetables-fortune-at-a-pocket-friendly-price-of-just-one-hundred-rupees/
- Published: 2026-11-06T05:41:23+00:00
- Author: ಹೊಸಕನ್ನಡ ನ್ಯೂಸ್

ತಮಿಳುನಾಡು ಸರ್ಕಾರವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಬಿಡುಗಡೆ
ನೀಡುವ ಸಲುವಾಗಿ ‘ವೆಟ್ರಿ-ವಿಜಯಿ/ಗೆಲುವು) ಹೆಸರಿನಲ್ಲಿ ಒಂದು ವಿಶೇಷ ಹಾಗೂ ಜನಪರ ತರಕಾರಿ ಪ್ಯಾಕ್
ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ರೂ. 100 ಕ್ಕೆ ಸುಮಾರು 2.6 ಕೆಜಿ ತೂಕದ 10 ಪ್ರಮುಖ ತರಕಾರಿಗಳನ್ನು
ಒಳಗೊಂಡ ಈ ಕಿಟ್ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.
​ನವೆಂಬರ್ 5 ರಿಂದ ನವೆಂಬರ್ 7 ರವರೆಗೆ(
ಮೂರು ದಿನಗಳ ವಿಶೇಷ ಮಾರಾಟ).ತಮಿಳುನಾಡಿನಾದ್ಯಂತ ಆಯ್ಕೆ ಮಾಡಲಾದ 218 ಕ್ಕೂ ಹೆಚ್ಚು ಸಹಕಾರ ಮಾರಾಟ
ಮಳಿಗೆಗಳು ಮತ್ತು ರಾಜಧಾನಿ ಚೆನ್ನೈನಲ್ಲಿ 4 ಮೊಬೈಲ್ ವಾಹನಗಳ ಮೂಲಕ ವಿತರಣೆ.

Sponsored

**ಯೋಜನೆಯ ಹಿನ್ನೆಲೆ ಮತ್ತು ವಿಶೇಷತೆಗಳು:​ಹಬ್ಬದ ದರ ಏರಿಕೆಗೆ ಕಡಿವಾಣ: ದೀಪಾವಳಿ ಹಬ್ಬದ ಸಮಯದಲ್ಲಿ
ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ, ವಿಪರೀತ ಬೆಲೆ ಏರಿಕೆಯಾಗುವುದರಿಂದ ಮಧ್ಯಮ ಮತ್ತು
ಬಡ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಸಬ್ಸಿಡಿ ದರದಲ್ಲಿ
ಈ ಕಿಟ್‌ಗಳನ್ನು ಒದಗಿಸುತ್ತಿದೆ.
​ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹಬ್ಬದ ಸಂದರ್ಭದಲ್ಲಿ
ವಿಜಯ್ ಸರ್ಕಾರದ ರಿಯಾಯಿತಿ ತರಕಾರಿ ಕಿಟ್‌ ಯೋಜನೆಯು ಅತ್ಯಂತ ನೆಮ್ಮದಿ ಹಾಗೂ ಸಮಾಧಾನ ತಂದಿದೆ ಎಂದು
ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Advertisement

Advertisement
