# ಸೋಷಿಯಲ್‌ ಮೀಡಿಯಾ ಸ್ಟಾರ್‌ ಮದುವೆ; ನಗದು ಸೇರಿ ಬಹುಮಾನ ಘೋಷಣೆ, ಕಾಲ್ತುಳಿತ, ಇಬ್ಬರು ಸಾವು

- Link: https://hosakannada.com/latest/social-media-star-wedding-cash-prize-announced-stampede-two-dead/
- Published: 2026-11-02T14:23:13+00:00
- Author: ಹೊಸಕನ್ನಡ ನ್ಯೂಸ್

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಮಾಡಿರುವ ಮಹಮೂದ್‌
ಅಲಿಯಾಸ್‌ ʼಮಿಸ್ಟರ್‌ ಪಟ್ಲೋʼ ತಮ್ಮ ಮೆಹಂದಿ ಸಮಾರಂಭಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿದ್ದು, 
ಜೊತೆಗೆ ನಗದು ಹಾಗೂ ಇತರ ಬಹುಮಾನಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಬಹುಮಾನ ಪಡೆಯಲು ಭಾರೀ
ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿದ್ದು, ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ.

Sponsored

ಜನರು ಏಕಾಏಕಿ ಮುಗಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

Advertisement

Advertisement
