# Belthangady : ಸಹೋದರಿಯರು ಬಸ್ ನಿಂದ ಬಿದ್ದ ಪ್ರಕರಣ – ಆಸ್ಪತ್ರೆಗೆ ತೆರಳಿ ಅರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಶಾಸಕ ಹರೀಶ್ ಪೂಂಜ!!

- Link: https://hosakannada.com/latest/sisters-fell-off-a-bus-mla-harish-poonja-went-to-the-hospital-to-check-on-their-health-and-reassured-the-family/
- Published: 2026-03-31T22:43:16+00:00
- Author: ಹೊಸಕನ್ನಡ ನ್ಯೂಸ್

Belthangady : ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಾಗಿಲು ಓಪನ್ ಆಗಿ ಬಾಗಿಲ ಬಳಿ ನಿಂತಿದ್ದ
ಸಹೋದರಿ ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಬಿದ್ದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆ
ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್
ಪೂಂಜ ಅವರು ಆಸ್ಪತ್ರೆಗೆ ತೆರಳಿ ಸಹೋದರಿಯರಿಬ್ಬರ ಆರೋಗ್ಯವನ್ನು ವಿಚಾರಿಸಿದ್ದಾರೆ.

Sponsored

ಬೆಳ್ತಂಗಡಿ ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಕೆ.ಎಸ್‌.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ
ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ  ಕುಟುಂಬ
ಸದಸ್ಯರಿಗೆ ಹಾಗೂ ಗಾಯಳು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದಾರೆ.

Advertisement

Advertisement

![](https://hosakannada.com/wp-content/uploads/2026/03/IMG-20260331-WA0043-300x225.
jpg)

ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ
ಒಬ್ಬಾಕೆ ಬೆಳ್ತಂಗಡಿಯ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದರೆ, ಮತ್ತೋರ್ವಳು ಎಸ್‌ಎಸ್‌ಎಲ್‌ಸಿ
ವಿದ್ಯಾರ್ಥಿನಿ. ತಕ್ಷಣವೇ ಗಾಯಾಳುಗಳನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ
ನೀಡಲಾಗುತ್ತಿದೆ. ಸದ್ಯ ಕ್ಷೇತ್ರದ ಶಾಸಕರು ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.

![](https://hosakannada.com/wp-content/uploads/2026/03/IMG-20260331-WA0042-300x225.
jpg)

Advertisement
