# ರೈಲಿನ ಬೋಗಿಗಳಲ್ಲಿ ರಾತ್ರಿ ಸಮಯ ಮೊಬೈಲ್‌, ಪವರ್‌ಬ್ಯಾಂಕ್‌ ಚಾರ್ಜ್‌ಗೆ ನಿರ್ಬಂಧ

- Link: https://hosakannada.com/latest/restriction-on-charging-mobile-phones-and-power-banks-in-train-coaches-at-night/
- Published: 2026-10-28T07:00:29+00:00
- Author: ಹೊಸಕನ್ನಡ ನ್ಯೂಸ್

ರೈಲ್ವೆ ಇಲಾಖೆಯು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾತ್ರಿ ವೇಳೆ ರೈಲುಗಳಲ್ಲಿ
ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ಪ್ರಮುಖ ಆದೇಶವನ್ನು ಜಾರಿಗೊಳಿಸಿದೆ:
​
ರೈಲುಗಳಲ್ಲಿ ರಾತ್ರಿ 11:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಚಾರ್ಜಿಂಗ್ ಪಾಯಿಂಟ್‌ಗಳ ವಿದ್ಯುತ್
ಸರಬರಾಜನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಈ ಸಮಯದಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ
ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಅವಕಾಶವಿರುವುದಿಲ್ಲ.​ಇತ್ತೀಚೆಗೆ ಸೌತ್ ಈಸ್ಟ್ ರೈಲ್ವೆ
ವಲಯದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದೊಬ್ಬರ ಪವರ್ ಬ್ಯಾಂಕ್ ಚಾರ್ಜ್‌ನಲ್ಲಿರುವಾಗ ಸ್ಫೋಟಗೊಂಡು
ಬೋಗಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡ ಘಟನೆ ನಡೆದಿತ್ತು.​ರಾತ್ರಿ ವೇಳೆ ಪ್ರಯಾಣಿಕರೆಲ್ಲರೂ
ಗಾಢ ನಿದ್ದೆಯಲ್ಲಿರುವಾಗ ಚಾರ್ಜ್‌ಗೆ ಹಾಕಿರುವ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಪವರ್ ಬ್ಯಾಂಕ್‌ಗಳು
ಅತಿ ಹೆಚ್ಚು ಬಿಸಿಯಾದರೆ ಶಾರ್ಟ್ ಸರ್ಕ್ಯೂಟ್ ಅಥವಾ ಅಗ್ನಿ ಅವಘಡಗಳು ಸಂಭವಿಸುವ ದೊಡ್ಡ ಅಪಾಯವಿರುತ್ತದೆ.
ಇದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Sponsored

​ರೈಲಿನಲ್ಲಿರುವ ಆನ್-ಬೋರ್ಡ್ ಸಿಬ್ಬಂದಿ ರಾತ್ರಿ 11:00 ಗಂಟೆಗೆ ತಪ್ಪದೆ ಎಲ್ಲಾ ಚಾರ್ಜಿಂಗ್ ಸಾಕೆಟ್‌ಗಳ
ಸ್ವಿಚ್‌ಗಳನ್ನು ಆಫ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರೈಲ್ವೆ ಮಂಡಳಿ ಎಲ್ಲಾ ವಲಯಗಳಿಗೆ
ಕಟ್ಟುನಿಟ್ಟಿನ ಸೂಚನೆ ನೀಡಿದೆ.

Advertisement

Advertisement

Advertisement
