# ಪಣೋಲಿಬೈಲ್ ನ ವಿವಾಹಿತ ಮಹಿಳೆ ಅನಾರೋಗ್ಯದಿಂದ ಮೃತ್ಯು

- Link: https://hosakannada.com/latest/panolibail-belthangady-women-death/
- Published: 2022-01-27T18:19:35+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ :ಪಣೋಲಿಬೈಲ್ ನ ವಿವಾಹಿತ ಮಹಿಳೆಯೋರ್ವರು ಅನಾರೋಗ್ಯಕ್ಕೆ ತುತ್ತಾಗಿ ಇಂದು ಮಧ್ಯಾಹ್ನ ಮೃತ
ಪಟ್ಟ ಘಟನೆ ನಡೆದಿದೆ.

Sponsored

![](https://hosakannada.com/wp-content/uploads/2022/01/IMG-20220127-WA0042.jpg)

Advertisement

Advertisement

ಮೃತ ಮಹಿಳೆಯನ್ನು ಬೆಳಾಲು ಗ್ರಾಮದ ಮುಂಡ್ರೋಟ್ಟು ಕಡಮಾಜೆ ನಿವಾಸದ ಪ್ರಿಯಾಂಕಾ ಎಂದು ಗುರುತಿಸಲಾಗಿದೆ.

ಇವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಹತ್ತಿರದ ಬಿ. ಸಿ ರೋಡ್ ಆಸ್ಪತ್ರೆಗೆ ರವಾನಿಸಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ
ಮೃತ ಪಟ್ಟಿದ್ದಾರೆ.

ಮೃತ ಪ್ರಿಯಾಂಕರನ್ನು ಒಂದು ವರ್ಷ ಹಿಂದೆ ಪಣೋಲಿಬೈಲ್ ನ ವ್ಯಕ್ತಿಯೋರ್ವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಮೃತರು ಪತಿ, ಹಾಗೂ ಮನೆಯವರನ್ನು ಅಗಲಿದ್ದಾರೆ.

Advertisement
