# ಹೊಸಬೆಟ್ಟು: ಆತ್ಮಹತ್ಯೆ ಪ್ರಕರಣ, ಸಮರ್ಥಿಸುವವರ ವಿರುದ್ಧ ಕಮಿಷನರ್ ಅಸಮಾಧಾನ

- Link: https://hosakannada.com/latest/hosabettu-suicide-case-commissioner-unhappy-with-those-justifying-it/
- Published: 2026-10-30T03:25:05+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು (ಹೊಸಬೆಟ್ಟು): ಹೊಸಬೆಟ್ಟು ಬಳಿ ನಿವಾಸಿ ಸೋಮನಾಥ್‌ (48) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ
ಕುರಿತಂತೆ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಸೋಮನಾಥ್‌ ಅವರ ಮೇಲೆ
ದಾಖಲಾಗಿರುವ ಪ್ರಕರಣಕ್ಕೆ ಕುರಿತಂತೆ ಅವರನ್ನು ಸಮರ್ಥನೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sponsored

ಸೋಮನಾಥ್‌ ಅವರ ಆತ್ಮಹತ್ಯೆ ಪ್ರಕರಣ ದುರದೃಷ್ಟಕರ. ಅವರ ಕುಟುಂಬದ ಮೇಲೆ ನಮ್ಮ ಸಹಾನುಭೂತಿ ಇದೆ. ಅವರು
ಕೇವಲ ಹುಡುಗಿಗೆ ಸ್ವಲ್ಪ ಬುದ್ಧಿ ಹೇಳಲು ಪ್ರಯತ್ನಿಸುತ್ತಿದ್ದ ಎಂದು ಅವರನ್ನು ಸಮರ್ಥನೆ ಮಾಡಲಾಗುತ್ತಿದೆ.
ಮೃತ ವ್ಯಕ್ತಿಯ ಬಗ್ಗೆ ಗೌರವವಿಟ್ಟು ಹುಡುಗಿಯ ಹೇಳಿಕೆಯ ವಿವರ ಬಹಿರಂಗಪಡಿಸದಿರಲು ನಿರ್ಧರಿಸಿದ್ದೆವು.
ಆದರೆ ಪೊಲೀಸರನ್ನು ಸಾರ್ವಜನಿಕವಾಗಿ ದೂಷಿಸುತ್ತಿರುವಾಗ ಮತ್ತು ಆಪಾದಿತರ ವರ್ತನೆಯನ್ನು ಸಮರ್ಥಿಸುವ
ರೀತಿಯಲ್ಲಿ ಘಟನೆಯನ್ನು ಬಿಂಬಿಸಲಾಗುತ್ತಿದೆ.

Advertisement

Advertisement

ಮೃತ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದರು. ಯುವತಿ ತನಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ನಿಂದಿಸಲಾಗುತ್ತಿದೆ
ಎಂದು ಅನಿಸಿ ಪೊಲೀಸರಿಗೆ ಕರೆ ಮಾಡಿದ್ದರು. ಆಕೆಯ ಹೇಳಿಕೆಯನ್ನು ಸಂಪೂರ್ಣವಾಗಿ ದಾಖಲಿಸಲಾಗಿದೆ. ಆಕೆ
ಮಾನಸಿಕವಾಗಿ ನೊಂದಿದ್ದಳು. ಹುಡುಗಿಯ ಘನತೆ ಮತ್ತು ಖಾಸಗಿತನವನ್ನು ಗೌರವಿಸುವ ಉದ್ದೇಶದಿಂದ ಹೇಳಿಕೆ
ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸುತ್ತಿಲ್ಲ. ಆಕೆಯ ಆರೋಪಗಳ ಸ್ವರೂಪ ಗಂಭೀರವಾಗಿದೆ ಎಂದು ಹೇಳಿರುವ
ಕುರಿತು ವರದಿಯಾಗಿದೆ.

Advertisement
