# ಸಚಿವ ಎಂ ಬಿ ಪಾಟೀಲ್‌ಗೆ ಡಿಜಿಟಲ್‌ ಅರೆಸ್ಟ್‌ ಯತ್ನ

- Link: https://hosakannada.com/latest/digital-arrest-attempt-on-minister-m-b-patil/
- Published: 2026-11-03T04:21:20+00:00
- Author: ಹೊಸಕನ್ನಡ ನ್ಯೂಸ್

**ಮಿನಿಸ್ಟರ್‌ ಅಂದರೂ ಬಿಡದ ಸೈಬರ್‌ ವಂಚಕರು**

Sponsored

ವಿಜಯಪುರ: ಇಡಿ ಹಾಗೂ ಸಿಬಿಐ ಕೇಸ್‌ ಹೆಸರಿನಲ್ಲಿ ಸೈಬರ್‌ ಅಪರಾಧಿಗಳು ಇಂಟರ್‌ನೆಟ್‌ ಕಾಲ್‌ ಮಾಡಿ
ನನಗೂ ಡಿಜಿಟಲ್‌ ಅರೆಸ್ಟ್‌ಗೆ ಯತ್ನ ಮಾಡಿದ್ದರು ಎಂದು ಬೃಹತ್‌ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ
ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದರು.

Advertisement

Advertisement

ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಮುಂಬೈ ವಿಮಾನ ನಿಲ್ದಾಣ ಬಳಿ 
ಪೊಲೀಸ್‌ ಠಾಣೆ ಹೆಸರಲ್ಲಿ ನನಗೂ ವಂಚಕರು ಬೋಗಸ್‌ ಕಾಲ್‌ ಮಾಡಿದ್ದರು ಎಂದು ಸೋಮವಾರ ಅವರು ಮಾತನಾಡುತ್ತಾ
ಹೇಳಿದರು.

ನಾನು ಮಿನಿಸ್ಟರ್‌ ಎಂದರೂ ಬಿಡಲಿಲ್ಲ. ಸಿಬಿಐ ಕೇಸ್‌, ಇಡಿ ಕೇಸ್‌ ಆಗಿದೆ ಎಂದು ಹೇಳಿ ಕಥೆ ಕಟ್ಟಲು
ಪ್ರಾರಂಭಿಸಿದ. ನಂತರ ನಾವು ಕಾಲ್‌ ಮಾಡಿದವನನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಿದೆವು. ಆದರೆ ಅವನು
ಸಿಗಲಿಲ್ಲ. ವರ್ಚುವಲ್‌ ಕಾಲ್‌ ಮಾಡಲು ವಂಚಕರು ಬೋಗಸ್‌ ಸಂಖ್ಯೆ ಬಳಕೆ ಮಾಡುತ್ತಾರೆ. ಹಾಗಾಗಿ ಸಾರ್ವಜನಿಕರು
ಎಚ್ಚರದಿಂದ ಇರಬೇಕು. ಅದರಲ್ಲೂ ಸೈಬರ್‌ ವಂಚನೆಗಳಿಗೆ ವಿದ್ಯಾವಂತರೇ ಅತಿ ಹೆಚ್ಚು ಒಳಗಾಗುತ್ತಿದ್ದಾರೆ
ಎಂದು ತಮ್ಮ ಕಳವಳ ವ್ಯಕ್ತಪಡಿಸಿದರು.

Advertisement
