# ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿತ್ತು ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು!

- Link: https://hosakannada.com/latest/coins-in-stomach/
- Published: 2022-08-01T15:31:25+00:00
- Author: ನಿಶ್ಮಿತಾ ಎನ್.

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು
ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.

Sponsored

ಹೌದು. ಇಂತಹುದೊಂದು ಘಟನೆ ರಾಜಸ್ಥಾನದ ಜೋಧ್ ‍ಪುರದಲ್ಲಿ ನಡೆದಿದೆ. 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ
1 ರೂಪಾಯಿಯ 63 ನಾಣ್ಯಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.

Advertisement

Advertisement

ಜುಲೈ 27 ರಂದು ತೀವ್ರ ಹೊಟ್ಟೆ ನೋವು ಎಂದು ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು
ಬಂದಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದಾರೆ. ಸ್ಕ್ಯಾನಿಂಗ್‌
ನಲ್ಲಿ ಹೊಟ್ಟೆಯಲ್ಲಿ ಲೋಹದ ಗಡ್ಡೆಯಂತಹ ವಸ್ತು ಪತ್ತೆಯಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ
ವೈದ್ಯರು ‘ಎಂಡೋಸ್ಕೋಪಿಕ್ ಕಾರ್ಯವಿಧಾನ ‘ ದ ಸಹಾಯದಿಂದ 2 ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ
ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ.

“ಹೊಟ್ಟೆ ನೋವಿನಿಂದ ವ್ಯಕ್ತಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದು, ಅವನ ಎಕ್ಸ್ – ರೇ ಮಾಡಿಸಿದಾಗ
ಅವನು ನಾಣ್ಯಗಳನ್ನು ನುಗ್ಗಿರುವುದು ಪತ್ತೆಯಾಗಿದೆ . ಈ ಕುರಿತು ವಿಚಾರಿಸಿದಾಗ ಆತ 10-15 ನಾಣ್ಯಗಳನ್ನು
ನುಂಗಿರುವುದನ್ನು ಒಪ್ಪಿಕೊಂಡಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. ಈತ ಆತ ಚೇತರಿಸಿಕೊಂಡಿದ್ದಾನೆ”
ಎಂದು ವೈದ್ಯ ನರೇಂದ್ರ ಭಾರ್ಗವ್ ತಿಳಿಸಿದರು.

Advertisement
