# ಬಂಟ್ವಾಳ: ಕೇರಳಕ್ಕೆ ಕೆಲಸಕ್ಕೆಂದು ಹೋದ ಯುವಕ ನಾಪತ್ತೆ

- Link: https://hosakannada.com/latest/bantwal-young-man-who-went-to-kerala-for-work-goes-missing/
- Published: 2026-10-26T13:19:53+00:00
- Author: ಹೊಸಕನ್ನಡ ನ್ಯೂಸ್

**ಬಂಟ್ವಾಳ: ಕೆಲಸದ ನಿಮಿತ್ತ ಕೇರಳಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಯುವಕನೊಬ್ಬ (27 ವರ್ಷ)
ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.**

Sponsored

ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ಸಂತೋಷ್‌ (27) ನಾಪತ್ತೆಯಾದ ಯುವಕ. ಇವರು ಕೆಂಪುಕಲ್ಲಿನ 
ಲಾರಿಗಳಲ್ಲಿನ ಲೋಡರ್‌ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Advertisement

Advertisement

ಮೇ 1, 2026 ರಂದು ಕೇರಳಕ್ಕೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ ಸಂತೋಷ್‌ ಮನೆಯಿಂದ ಹೊರಟಿದ್ದು, 
ಅಂದಿನಿಂದ ಮನೆಗೆ ವಾಪಸು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರವಾಣಿ ಕರೆ ಕೂಡಾ ಮಾಡಿಲ್ಲ
ಎನ್ನಲಾಗಿದೆ.

ವಯಸ್ಸು: 27 ವರ್ಷ
ಎತ್ತರ : ಸುಮಾರು 6 ಅಡಿಮೈಕಟ್ಟು: ಸಾಧಾರಣಮೈಬಣ್ಣ: ಕಪ್ಪುವಿದ್ಯಾಭ್ಯಾಸ: 10ನೇ
ತರಗತಿಭಾಷೆಗಳು: ಕನ್ನಡ, ತುಳು ಮತ್ತು ಮಲಯಾಳಂ

ಈತನ ಕುರಿತು ಎಲ್ಲಿಯಾದರೂ ತಿಳಿದು ಬಂದಲ್ಲಿ, ಬಂಟ್ವಾಳ ನಗರ ಪೊಲೀಸ್‌ ಠಾಣೆ ಅಥವಾ ಪೊಲೀಸ್‌ ನಿಯಂತ್ರಣ
ಕೊಠಡಿಯನ್ನು ಸಂಪರ್ಕಿಸಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

Advertisement
