# School Bus Accident: ಶಾಲಾ ಬಸ್ ಪಲ್ಟಿ; 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ!!

- Link: https://hosakannada.com/latest/assam-school-bus-accident-more-than-20-students-injured-latest-news/
- Published: 2024-01-17T10:10:25+00:00
- Author: ಹೊಸಕನ್ನಡ ನ್ಯೂಸ್

School Bus Accident: ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ
ಶಾಲಾ ಬಸ್(Assam School Bus)ಪಲ್ಟಿಯಾಗಿದ್ದು, ಇದರಿಂದ 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ(
Students Injured)ಘಟನೆ ವರದಿಯಾಗಿದೆ.

Sponsored

ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್‌ನಿಕ್‌ಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ
ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಅನುಸಾರ, ಇಂದು ಬೆಳಗ್ಗೆ
10:30 ರ ಸುಮಾರಿಗೆ ರಾಜ್ಯದ ಹೈಲಕಂಡಿ ಜಿಲ್ಲೆಯ ಕತಖಾಲ್ ಪ್ರದೇಶದಲ್ಲಿ ಈ ಅವಘಡ ( School Bus Accident)
ಸಂಭವಿಸಿದೆ.

Advertisement

Advertisement

ಹೆದ್ದಾರಿಯಿಂದ ಉರುಳುವ ಮೊದಲು ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ 
ಸವಾರ ಸೈಕಲ್ ಸವಾರನನ್ನು ರಕ್ಷಿಸಲು ಯತ್ನಿಸಿದ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ
ಗಾಯಗೊಂಡ 25 ರಲ್ಲಿ ಸುಮಾರು 20 ವಿದ್ಯಾರ್ಥಿಗಳಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಒಟ್ಟು ನಾಲ್ವರ
ಸ್ಥಿತಿ ಗಂಭೀರವಾಗಿದ್ದು, ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

**ಇದನ್ನೂ ಓದಿ: [Edible Oil Import : ಗೃಹಿಣಿಯರಿಗೆ ಸಿಹಿ ಸುದ್ದಿ; ಖಾದ್ಯ ತೈಲ ಕಡಿಮೆ ದರದಲ್ಲಿ ಪೂರೈಕೆಗೆ ಸರ್ಕಾರ ನಿರ್ಧಾರ!!](https://hosakannada.com/2024/01/17/government-extended-edible-oil-import-at-lower-duty-period-latest-updates/)**

Advertisement
