# ʼಅರ್ನಬ್‌ʼ ನಂತರ ಇನ್ನೊಂದು ಚಂಡಮಾರುತ ಎಂಟ್ರಿ- ಕರಾವಳಿಗೆ ಮತ್ತೊಂದು ಗಂಡಾಂತರ, ಅಪ್ಪಳಿಸಲಿದೆ ʼಮುರುಸುʼ

- Link: https://hosakannada.com/latest/after-arnab-another-storm-entry-another-mess-on-the-coast-murusu-is-going-to-stir-things-up/
- Published: 2026-11-02T02:51:42+00:00
- Author: ಹೊಸಕನ್ನಡ ನ್ಯೂಸ್

**ಅರ್ನಬ್‌ ಚಂಡಮಾರುತದ ಪರಿಣಾಮ ಮಾಸುವ ಮುನ್ನವೇ, ಮಂಗಳವಾರ ʼಮುರಸುʼ (ನಗಾರಿ) ಎಂಬ ಇನ್ನೊಂದು ಚಂಡಮಾರುತ
ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ.**

Sponsored

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಚಂಡಮಾರುತವು ನೆಲ್ಲೂರು ಮತ್ತು ನರಸಾಪುರ ನಡುವೆ ಕರಾವಳಿ ದಾಟುವ
ಸಾಧ್ಯತೆಯಿದ್ದು, ಗಂಟೆಗೆ 100 ರಿಂದ 110ಕಿ.ಮೀ. ವೇಗದಲ್ಲಿ ಕೆಲವೊಮ್ಮೆ 120 ಕಿ.ಮೀ ವೇಗದಲ್ಲಿ ಭಾರೀ
ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Advertisement

Advertisement

ಈ ಕಾರಣದಿಂದ ತೆಲಂಗಾಣದ ಆರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಐದು ಜಿಲ್ಲೆಗಳಿಗೆ
ಯೆಲ್ಲೋ ಅಲರ್ಟ್‌ ಜಾರಿ ಮಾಡಲಾಗಿದೆ. ತಮಿಳುನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ಘೋಷಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಮುದ್ರ ತೀರದ ಪ್ರದೇಶದ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
ಚಂಡಮಾರುತದ ಪ್ರಭಾವದಿಂದ ಕರಾವಳಿ ಹಾಗೂ ಒಳನಾಡಿನ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.

Advertisement
