# ಸೋಷಿಯಲ್ ಮೀಡಿಯಾದಲ್ಲಿ 21 ಲಕ್ಷ ಫಾಲೋವರ್ಸ್‌; ಆದರೆ ಚುನಾವಣೆಯಲ್ಲಿ ಸಿಕ್ಕಿದ್ದು ಕೇವಲ 33 ಮತಗಳು!

- Link: https://hosakannada.com/latest/21-lakh-followers-on-social-media-but-got-only-33-votes-in-the-election/
- Published: 2026-10-28T07:17:22+00:00
- Author: ಹೊಸಕನ್ನಡ ನ್ಯೂಸ್

​ಸಾಮಾಜಿಕ ಜಾಲತಾಣದ ‘ರೀಲ್ ಲೈಫ್’ ಬೇರೆ, ವಾಸ್ತವದ ‘ರಿಯಲ್ ಲೈಫ್ ಬೇರೆ ಎಂಬುದನ್ನು ಸಾಬೀತುಪಡಿಸುವ
ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಡಿಜಿಟಲ್ ಲೋಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ
ಜನಪ್ರಿಯ ಇನ್‌ಫ್ಲುಯೆನ್ಸರ್‌ ಒಬ್ಬರು ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯ
ಸೋಲು ಅನುಭವಿಸಿದ್ದಾರೆ.
​​ಯಾರು ಈ ಅಭ್ಯರ್ಥಿ? ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಒಸಿಯಾ ತಾಲೂಕಿನ‘
ಇಂದೋ ಗಟಾ ಕಿ ಧಾಣಿ’ (ಇಂದೋನ್‌ ಕಿ ಧನಿ) ಗ್ರಾಮ ಪಂಚಾಯತಿಯ ಸರಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ)
ಸ್ಥಾನಕ್ಕೆ ಓಂ ಪ್ರಕಾಶ್ ಬಿಷ್ಣೋಯಿ ಎಂಬುವವರು ಸ್ಪರ್ಧಿಸಿದ್ದರು.​ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷಕ್ಕೂ
ಅಧಿಕ, ಯೂಟ್ಯೂಬ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಹಾಗೂ ಫೇಸ್‌ಬುಕ್‌ನಲ್ಲಿ 2.30 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು(
ಒಟ್ಟು 21 ಲಕ್ಷಕ್ಕೂ ಹೆಚ್ಚು ಜನ) ಇವರು ಹೊಂದಿದ್ದಾರೆ. ದೇಸಿ ಶೈಲಿಯ ಅಡುಗೆ ಹಾಗೂ ವಿವಿಧ ವೀಡಿಯೊಗಳ
ಮೂಲಕ ಇವರು ಡಿಜಿಟಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.​ಆ ಗ್ರಾಮ ಪಂಚಾಯತಿಯಲ್ಲಿ ಒಟ್ಟು 1,600
ಮತಗಳು ಇದ್ದವು. ಸಾಮಾಜಿಕ ಜಾಲತಾಣದಲ್ಲಿದ್ದ ಅಪಾರ ಜನಪ್ರಿಯತೆಯನ್ನು ಕಂಡು ಇವರು ಚುನಾವಣೆಯಲ್ಲಿ 
ಸುಲಭವಾಗಿ ಗೆಲ್ಲಬಹುದು ಎಂದು ಅಂದುಕೊಳ್ಳಲಾಗಿತ್ತು. ​ಆದರೆ, ಮತ ಎಣಿಕೆ ಪೂರ್ಣಗೊಂಡಾಗ ಬಂದ ಫಲಿತಾಂಶ
ಎಲ್ಲರಿಗೂ ಅಚ್ಚರಿ ತಂದಿತು. ಓಂ ಪ್ರಕಾಶ್ ಬಿಷ್ಣೋಯಿ ಪಡೆದ ಒಟ್ಟು ಮತಗಳು ಕೇವಲ 33 ಮಾತ್ರ!​ಆ 33
ಮತಗಳು ಯಾರದ್ದು?​ಖದ್ದು ಓಂ ಪ್ರಕಾಶ್ ಬಿಷ್ಣೋಯಿ ಅವರೇ ಮಾಧ್ಯಮಗಳಿಗೆ ತಿಳಿಸಿದಂತೆ, ತಮಗೆ ಬಂದ ಆ
33 ಮತಗಳಲ್ಲಿ 11 ಮತಗಳು ತಮ್ಮ ಸ್ವಂತ ಕುಟುಂಬದವರಿಂದ ಬಂದವು. ಇನ್ನುಳಿದವು ಕೆಲವೇ ಕೆಲವು ಸ್ನೇಹಿತರು
ಹಾಕಿದ ಮತಗಳಷ್ಟೇ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ, ಆ ಕ್ಷೇತ್ರದಲ್ಲಿ
ಬಿದ್ದ ‘ನೋಟಾ’ ಮತಗಳ ಸಂಖ್ಯೆಯೇ 40ಕ್ಕೂ ಹೆಚ್ಚಿತ್ತು!

Sponsored

​ಸೋಲಿಗೆ ಕಾರಣವೇನು?
​ನೆಟಿಜೆನ್‌ಗಳು ಬೇರೆ, ಮತದಾರರು ಬೇರೆ: ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡುವವರು
ಹಾಗೂ ಲೈಕ್ ಮಾಡುವವರು ಬೇರೆ ರಾಜ್ಯ ಅಥವಾ ದೇಶದವರಾಗಿರಬಹುದು. ಆದರೆ ಸ್ಥಳೀಯ ಚುನಾವಣೆಯಲ್ಲಿ ಮತ 
ಹಾಕುವವರು ಆ ಗ್ರಾಮದವರು ಮಾತ್ರ. ಡಿಜಿಟಲ್ ಖ್ಯಾತಿ ಸ್ಥಳೀಯ ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ ಎಂಬುದಕ್ಕೆ
ಇದು ನಿದರ್ಶನ.​ಗ್ರಾಮೀಣ ಭಾಗದ ರಾಜಕೀಯದಲ್ಲಿ ನೇರ ಜನಸಂಪರ್ಕ, ಜಾತಿ ಸಮೀಕರಣಗಳು ಮತ್ತು ಸ್ಥಳೀಯ 
ಜನರ ನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ಮುಖ್ಯವಾಗುತ್ತದೆ. ಇನ್ನು ತಮ್ಮ ಸೋಲಿಗೆ ಬಹಿರಂಗವಾಗಿ
ಮಾತನಾಡಿರುವ ಬಿಷ್ಣೋಯಿ, ತಾನು ಮದ್ಯ ಅಥವಾ ಲಭ್ಯವಿರುವ ಇತ್ಯಾದಿ ಆಮಿಷಗಳನ್ನು ಒಡ್ಡದೆ ಪ್ರಾಮಾಣಿಕವಾಗಿ
ಸ್ಪರ್ಧಿಸಿದ್ದೆ ಎಂದು ತಿಳಿಸಿದ್ದಾರೆ.

Advertisement

Advertisement

​ಈ ಘಟನೆಯು ಸಾಮಾಜಿಕ ಜಾಲತಾಣದ ಜನಪ್ರಿಯತೆಗೂ ಮತ್ತು ವಾಸ್ತವ ನೆಲೆಯ ರಾಜಕೀಯಕ್ಕೂ ಇರುವ ಅಂತರವನ್ನು
ಜಗಜ್ಜಾಹೀರುಗೊಳಿಸಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಇದುವೇ ಹಾಟ್ ಟಾಪಿಕ್ ಆಗಿದೆ.

Advertisement
