# SSC( ಸಿಬ್ಬಂದಿ ನೇಮಕಾತಿ ಆಯೋಗ) ನಲ್ಲಿ ಖಾಲಿ ಇರುವ 1920 ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

- Link: https://hosakannada.com/jobs/staff-selectiom-commission-recruitment-2022-apply-for-1920-post/
- Published: 2022-05-12T15:11:11+00:00
- Author: Mallika

ಸಿಬ್ಬಂದಿ ನೇಮಕಾತಿ ಆಯೋಗ ( ಎಸ್ ಎಸ್ ಸಿ)ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಸೆಲೆಕ್ಷನ್ ಪೋಸ್ಟ್ ಗಳ 10 ನೇ ಹಂತದ 1920 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಬಹುದು.

Sponsored

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ
ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 13, 2022 ಕೊನೆಯ ದಿನವಾಗಿದೆ.

Advertisement

Advertisement

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 12-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-06-2022

ಆಗಸ್ಟ್ ನಲ್ಲಿ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. MTS, ಚಾಲಕ, ವೈಜ್ಞಾನಿಕ ಸಹಾಯಕ, ಅಕೌಂಟೆಂಟ್,
ಹೆಡ್ ಕ್ಲರ್ಕ್, ಕನ್ಸರ್ವೇಶನ್ ಅಸಿಸ್ಟೆಂಟ್ ಟೆಕ್ನಿಕಲ್, ಜೂನಿಯರ್ ಕಂಪ್ಯೂಟರ್ ಮೆಟ್ರಿಕ್ಯುಲೇಷನ್,
ಹೈಯರ್ ಸೆಕೆಂಡರಿ ಲೆವೆಲ್ ಮತ್ತು ಗ್ರಾಜ್ಯುಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ
ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಸಿಬ್ಬಂದಿ ನೇಮಕಾತಿ ಆಯೋಗದ ನಿಯಮಾನುಸಾರ ವಿದ್ಯಾರ್ಹತೆ
ಪಡೆದಿರಬೇಕು. 10 ನೆ ತರಗತಿ, ಪಿಯುಸಿ ಮತ್ತು ಪದವಿ ವಿದ್ಯಾರ್ಹತೆ ಮಾಡಿರಬೇಕು.

![](https://hosakannada.com/wp-content/uploads/2022/05/IMG_20220512_144732.jpg)

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಆನ್‌ಲೈನ್ ಪರೀಕ್ಷೆ
ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಟೈಪಿಂಗ್/ ಡೇಟಾ ಎಂಟ್ರಿ/ಕಂಪ್ಯೂಟರ್
ಪ್ರಾವೀಣ್ಯತೆ ಪರೀಕ್ಷೆ ಮುಂತಾದ ಕೌಶಲ್ಯ ಪರೀಕ್ಷೆಗಳನ್ನು ನಡೆಸಿ ಆಯಾಯ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ

[notice_rhq_12052022](https://hosakannada.com/wp-content/uploads/2022/05/notice_rhq_12052022.pdf)
[Download](https://hosakannada.com/wp-content/uploads/2022/05/notice_rhq_12052022.pdf)

ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಲು ಕೋರಲಾಗಿದೆ.

Advertisement
