# SSC ಇಂದ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ಅಧಿಸೂಚನೆ ಪ್ರಕಟ | ಬರೋಬ್ಬರಿ 11,409 ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

- Link: https://hosakannada.com/jobs/ssc-mts-havaldar-exam-notification-2022/
- Published: 2023-01-19T12:41:42+00:00
- Author: Mallika

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ
ನೇಮಕಾತಿ ಆಯೋಗವು ಇದೀಗ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ನಾನ್-ಟೆಕ್ನಿಕಲ್) ಹಾಗೂ ಹವಾಲ್ದಾರ್ ಹುದ್ದೆಗಳ
ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Sponsored

ಅಭ್ಯರ್ಥಿಗಳು ಜನವರಿ 18 ರಿಂದ ಫೆಬ್ರುವರಿ 17, 2023ರವರೆಗೆ ಪರೀಕ್ಷೆಗೆ ರಿಜಿಸ್ಟ್ರೇಷನ್‌ ಪಡೆಯಲು
ಅವಕಾಶ ನೀಡಲಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವುದಾಗಿ
ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಹುದ್ದೆಗಳಿಗೆ 7ನೇ ವೇತನ ಆಯೋಗದ ಪ್ರಕಾರ ಲೆವೆಲ್-1 ವೇತನ ನೀಡಲಾಗುತ್ತದೆ.
ಗ್ರೂಪ್‌ ಸಿ ನಾನ್‌-ಗೆಜೆಟೆಡ್ ಹುದ್ದೆಗಳು ಇವಾಗಿವೆ.

Advertisement

Advertisement

ಹುದ್ದೆಗಳ ವಿವರ : ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) : 10,880
ಹವಾಲ್ದಾರ್ ಇನ್ ಸಿಬಿಐಸಿ ಮತ್ತು
ಸಿಬಿಎನ್ : 529

ಆನ್‌ಲೈನ್‌ ರಿಜಿಸ್ಟ್ರೇಷನ್ ಸಲ್ಲಿಸಲು ಆರಂಭಿಕ ದಿನಾಂಕ : 18-01-2023
ಆನ್‌ಲೈನ್‌ ರಿಜಿಸ್ಟ್ರೇಷನ್
ಸಲ್ಲಿಕೆಗೆ ಕೊನೆ ದಿನಾಂಕ: 17-02-2023 ರಾತ್ರಿ 11 ಗಂಟೆವರೆಗೆ.ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ
ಪಾವತಿಗೆ ಕೊನೆ ದಿನಾಂಕ: 19-02-2023 ರಾತ್ರಿ 11 ಗಂಟೆವರೆಗೆ.ಆಫ್‌ಲೈನ್‌ ಚಲನ್‌ ಜೆನೆರೇಟ್ ಮಾಡಲು
ಕೊನೆ ದಿನಾಂಕ:19-02-2023 ರಾತ್ರಿ 11 ಗಂಟೆವರೆಗೆ.ಆಫ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ:
20-02-2023ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ : ಫೆಬ್ರುವರಿ 23 ರಿಂದ 24 ರ ರಾತ್ರಿ
11 ಗಂಟೆವರೆಗೆ.ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: 2023 ರ ಏಪ್ರಿಲ್

ಶೈಕ್ಷಣಿಕ ಅರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ 
ತತ್ಸಮಾನ ಪರೀಕ್ಷೆ ಪಾಸ್‌ ಮಾಡಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು. ಎಂಟಿಎಸ್ ಮತ್ತು ಹವಾಲ್ದಾರ್ ಇನ್‌ ಸಿಬಿಎನ್ (ಕಂದಾಯ ಇಲಾಖೆ)
ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.

 * ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27
   ವರ್ಷ ಮೀರಿರಬಾರದು.
   ಎಸ್‌ಸಿ / ಎಸ್‌ಟಿ ಅಭ್ಯರ್ಥಿ : 5 ವರ್ಷ, ಒಬಿಸಿ ಅಭ್ಯರ್ಥಿ : 3 ವರ್ಷ, 
   ಪಿಡಬ್ಲ್ಯೂಡಿ ಅಭ್ಯರ್ಥಿ (Unreserved) : 10 ವರ್ಷ, Pwd (OBC) : 13 ವರ್ಷ, Pwd (SC/ST):
   15 ವರ್ಷ, ಮಾಜಿ ಸೈನಿಕ (ESM) : 3 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯಿಸುತ್ತದೆ.

ಅರ್ಜಿ ಶುಲ್ಕ : ರೂ.100, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ
ಶುಲ್ಕ ವಿನಾಯಿತಿ ನೀಡಲಾಗಿದೆ.

ವೇತನ ಶ್ರೇಣಿ : Rs.5200-20200.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://ssc.nic.in/

ಹೆಚ್ಚಿನ ಮಾಹಿತಿಗಾಗಿ ಈ [ಲಿಂಕ್‌ ಕ್ಲಿಕ್‌](https://ssc.nic.in/SSCFileServer/PortalManagement/UploadedFiles/notice_mts_18012023.pdf)
ಮಾಡಿ

Advertisement
