# Mangalore University Job : ಮಂಗಳೂರು ವಿವಿಯಲ್ಲಿ ನೇಮಕಾತಿ! ನಾನ್‌ಟೀಚಿಂಗ್‌ ಹುದ್ದೆಗೆ ಅರ್ಜಿ ಆಹ್ವಾನ!!!

- Link: https://hosakannada.com/jobs/recruitment-in-mangalore-university/
- Published: 2023-03-15T10:51:02+00:00
- Author: ಕಾವ್ಯ ವಾಣಿ

Mangalore University Job: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ
ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ನಾನ್
ಟೀಚಿಂಗ್ ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತರು ಈ ಹುದ್ದೆಗಳಿಗೆ 
ಅರ್ಜಿ ಸಲ್ಲಿಸಬಹುದಾಗಿದೆ.

Sponsored

ಮಂಗಳೂರು ವಿಶ್ವವಿದ್ಯಾಲಯವು (Mangalore University Job) ಕರ್ನಾಟಕ ಪ್ರಜೆಗಳಿಂದ ಖಾಲಿ ಇರುವ 
ವಿವಿಧ ಬೋಧಕೇತರ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಲ್ಲಿ
ಆಸಕ್ತಿ ಇರುವವರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು .

Advertisement

Advertisement

ಹುದ್ದೆಗಳ ವಿವರ ಈ ಕೆಳಗಿನಂತಿದೆ :
 ಟೆಕ್ನೀಷಿಯನ್ ಗ್ರೇಡ್ 2 : 1 ಶಿಫ್ಟ್‌ ಮೆಕ್ಯಾನಿಕ್ : 1 ಕುಕ್/
ಅಸಿಸ್ಟಂಟ್ ಕುಕ್ : 2 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಟಿ ಅಭ್ಯರ್ಥಿಗಳು ಅರ್ಹರು. ಒಂದು 
ವೇಳೆ ಎಸ್‌ಟಿ ಅಭ್ಯರ್ಥಿಗಳು ಅರ್ಹರು ಸಿಗದಿದ್ದಲ್ಲಿ ಎಸ್‌ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆವಾರು ಶೈಕ್ಷಣಿಕ ಅರ್ಹತೆ / ಇತರೆ ಅರ್ಹತೆ:
 ಟೆಕ್ನೀಷಿಯನ್ ಗ್ರೇಡ್ 2 : ಐಟಿಐ ವಿದ್ಯಾರ್ಹತೆ
ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು. ಶಿಫ್ಟ್‌ ಮೆಕ್ಯಾನಿಕ್ : ಎಸ್‌ಎಸ್‌ಎಲ್‌ಸಿ (
SSLC ) ಜತೆಗೆ ಇಲೆಕ್ಟ್ರಿಕಲ್ ವೈರಿಂಗ್ ನಲ್ಲಿ ಕೋರ್ಸ್‌ ಮಾಡಿರಬೇಕು. ಕಾರ್ಯಾನುಭವ ಹೊಂದಿರಬೇಕು.
ಕುಕ್ / ಅಸಿಸ್ಟಂಟ್ ಕುಕ್ : ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ 3 ವರ್ಷ ಕಾರ್ಯಾನುಭವ ಹೊಂದಿರಬೇಕು. 
ವಯಸ್ಸಿನ ಅರ್ಹತೆಗಳು: ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಅಪ್ಲಿಕೇಶನ್
ಶುಲ್ಕ : ರೂ.200. ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-04-2023 ರ ಸಂಜೆ 05-00 ಗಂಟೆವರೆಗೆ.

ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಮಂಗಳೂರು ವಿಶ್ವವಿದ್ಯಾಲಯದ
ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕಾಗಿ [www.mangaloreuniversity.ac.in](http://www.mangaloreuniversity.ac.in)
ಗೆ ಭೇಟಿ ನೀಡಿರಿ.

ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್‌ ಮಾದರಿ. ಅರ್ಜಿಯನ್ನು 10 ಸೆಟ್‌ನಲ್ಲಿ ಕವರ್‌ ಲೆಟರ್‌ನ ಮೇಲೆ
ಯಾವ ಹುದ್ದೆಗೆ ಅರ್ಜಿ ಎಂದು ವಿವರ ಬರೆದು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ‘The Registrar, Mangalore University, MangalaGangothri,
Mangaluru – 574199.

ಅರ್ಜಿ ಶುಲ್ಕವನ್ನು ಚಲನ್‌ ಮೂಲಕ ಅಥವಾ ಡಿಡಿ ಯನ್ನು – ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾಲಯ
ರವರ ಹೆಸರಿನಲ್ಲಿ ತೆಗೆದು ಪಾವತಿಸಬೇಕು.

Advertisement
