# KPSC RDWSD AE Exam : ಕೆಪಿಎಸ್‌ಸಿ ಆರ್‌ಡಿಡಬ್ಲುಎಸ್‌ಡಿ ಎಇ ಪರೀಕ್ಷೆ ಸಮಯ ಬದಲಾವಣೆ !

- Link: https://hosakannada.com/jobs/kpsc-rdwsd-ae-exam-timings-changed/
- Published: 2023-02-16T11:13:55+00:00
- Author: ಹೊಸಕನ್ನಡ ನ್ಯೂಸ್

ಕರ್ನಾಟಕ ಲೋಕಸೇವಾ ಆಯೋಗವು(KPSC) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ(RDWSD)
ಸಹಾಯಕ ಅಭಿಯಂತರರು ಗ್ರೇಡ್-1(GRADE-1) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ
ಮಾಹಿತಿ ಇಲ್ಲಿದೆ. RDWSD ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ಗ್ರೇಡ್‌-1 ಹುದ್ದೆಯ ಪರೀಕ್ಷೆಗೆ ಸಂಬಂಧಪಟ್ಟಂತೆ
ಕಡ್ಡಾಯ ಕನ್ನಡ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡಿ KPSC ಪ್ರಕಟಣೆ ಹೊರಡಿಸಲಾಗಿದೆ.

Sponsored

 

Advertisement

Advertisement

ಸದ್ಯ, ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಈ ಮೊದಲೇ ಪ್ರಕಟಿಸಿರುವಂತೆ ವಿವಿಧ ಗ್ರೂಪ್‌
ಎ, ಬಿ ಮತ್ತು ಸಿ ಹುದ್ದೆಗಳಿಗೂ ಒಂದೇ ಬಾರಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 25-
02-2023 ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದೀಗ, ಕಾರಣಾಂತರಗಳಿಂದ ಪರೀಕ್ಷೆಯ 
ಅವಧಿಯನ್ನು ಬದಲಾವಣೆ ಮಾಡಲಾಗಿದೆ. ಕೆಪಿಎಸ್‌ಸಿ ಈ ಪರೀಕ್ಷೆಗಳಿಗೆ ಮುಂಚಿತವಾಗಿ ಪ್ರವೇಶ ಪತ್ರವನ್ನು
ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್ / ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್‌
ನೀಡಿ ಲಾಗಿನ್ ಮಾಡಿಕೊಳ್ಳುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

 

ದಿನಾಂಕ 21-02-2022 ರಂದು ಕೆಪಿಎಸ್‌ಸಿ’ಯು ಆರ್‌ಡಿಡಬ್ಲ್ಯೂಎಸ್‌ಡಿ ಯ ಸಹಾಯಕ ಇಂಜಿನಿಯರ್ ಗ್ರೇಡ್‌-
1 ಹುದ್ದೆಗಳಿಗೆ ನೇಮಕ ಅಧಿಸೂಚನೆ ಪ್ರಕಟಿಸಲಾಗಿದ್ದು, ಈ ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ
ಸಂಬಂಧಿಸಿದಂತೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 25-02-2023 ರಂದು ಬೆಳಿಗ್ಗೆ 10-00
ಗಂಟೆಯಿಂದ 11-30 ಗಂಟೆಯ ಬದಲಾಗಿ AE ಗ್ರೇಡ್‌-1 ಹುದ್ದೆಗಳಿಗೆ ಮಧ್ಯಾಹ್ನ 03 ಗಂಟೆಯಿಂದ 05 ಗಂಟೆವರೆಗೆ
ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಬದಲಾವಣೆಯನ್ನು ಹೊರತುಪಡಿಸಿ,ದಿನಾಂಕ 26-02-2023 ರ ವೇಳಾಪಟ್ಟಿಯಲ್ಲಿ
ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.

Advertisement
