# KPSC Exam Time Table 2022 : ಕೆಪಿಎಸ್ ಸಿ ಯಿಂದ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ!!!

- Link: https://hosakannada.com/jobs/kpsc-published-various-post-exam-time-table-for-2022-and-2023-details-here/
- Published: 2022-10-21T10:49:42+00:00
- Author: Mallika

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (KPSC) 2022 ರ ಮಾರ್ಚ್‌ನಲ್ಲಿ ಅಧಿಸೂಚಿಸಿದ್ದ ಗ್ರಾಮೀಣ ಕುಡಿಯುವ
ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ ಗ್ರೇಡ್-1 ಹುದ್ದೆಗಳು, ವಿವಿಧ ಗ್ರೂಪ್
ಸಿ ಹುದ್ದೆಗಳು, ಪೊಲೀಸ್ ಇಲಾಖೆಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿನ ಗ್ರೂಪ್ ಎ ವೃಂದದ ಹುದ್ದೆಗಳ
ಭರ್ತಿಗೆ ಸಂಬಂಧಿಸಿದಂತೆ ಇದೀಗ ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿಯನ್ನು 
ಬಿಡುಗಡೆ ಮಾಡಿದೆ.

Sponsored

ದಿನಾಂಕ [09-03-2022](https://hosakannada.com/jobs/kpsc-published-various-post-exam-time-table-for-2022-and-2023-details-here/09032022)
ರಂದು ಅಧಿಸೂಚಿಸಿದ್ದ ಆಯುಷ್ ಇಲಾಖೆಯಲ್ಲಿನ ಔಷಧ ವಿಶ್ಲೇಷಕರು (ಬಾಟನಿ) ಮತ್ತು (ರಾಸಾಯನ ಶಾಸ್ತ್ರ)
ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನವೆಂಬರ್ 29, 30, 2022 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಈ ಪರೀಕ್ಷೆಗಳನ್ನು ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುತ್ತದೆ.

Advertisement

Advertisement

ದಿನಾಂಕ [17-03-2022](https://hosakannada.com/jobs/kpsc-published-various-post-exam-time-table-for-2022-and-2023-details-here/17032022)
ರಂದು ಅಧಿಸೂಚಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರು 
89+47 (HK) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿಸೆಂಬರ್ 24, 25, 2022 ರಂದು ಬೆಂಗಳೂರು
ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತದೆ.

ದಿನಾಂಕ [19-03-2022](https://hosakannada.com/jobs/kpsc-published-various-post-exam-time-table-for-2022-and-2023-details-here/19032022)
ರಂದು ಹೊರಡಿಸಿದ್ದ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ / ಪುರಸಭೆ /
ಪಟ್ಟಣ ಪಂಚಾಯಿತಿ) ವಿವಿಧ ಗ್ರೂಪ್ ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ 2023ರ ಜನವರಿ 21, 22
ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ [ಲಿಂಕ್ ಕ್ಲಿಕ್](https://kpsc.kar.nic.in/) ಮಾಡಿ

Advertisement
