# KPSC ಕಿರಿಯ ಅಭಿಯಂತರರ ನೇಮಕಾತಿ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ!

- Link: https://hosakannada.com/jobs/kpsc-junior-engineer-recruitment-2023/
- Published: 2023-04-20T14:51:41+00:00
- Author: ಹೊಸಕನ್ನಡ ನ್ಯೂಸ್

KPSC: ಕರ್ನಾಟಕ ಲೋಕ ಸೇವಾ ಆಯೋಗದ ಕಿರಿಯ ಅಭಿಯಂತರರ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ
ಬಹು ಮುಖ್ಯ ಮಾಹಿತಿ ಪ್ರಕಟವಾಗಿದೆ.ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯ ಅನುಸಾರ 17-03-2022 ಸಂಬಂಧಿಸಿದ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ ಹುದ್ದೆಗಳ (89+47 ಹೈ.
ಕ) ನೇಮಕಾತಿ ಪ್ರಕ್ರಿಯೆಗೆ ಆಯೋಗದ ಕೇಂದ್ರ ಕಚೇರಿಯಲ್ಲಿ ಮೂಲದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತದೆ.
ವೇಳಾಪಟ್ಟಿಯೊಳಗೊಂಡ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ https://kpsc.kar.nic.
in/Lists ರಡಿಯಲ್ಲಿ ಅಭ್ಯರ್ಥಿಗಳ ಮಾಹಿತಿಯ ಸಲುವಾಗಿ ಪ್ರಕಟಿಸಿರುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ(
KPSC)ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Sponsored

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ ಹುದ್ದೆಗಳ (89+47 ಹೈ.
ಕ) ನೇಮಕಾತಿಗಾಗಿ ಏಪ್ರಿಲ್ 26 ಮತ್ತು 27 ರಂದು ಮೂಲ ದಾಖಲೆಗಳ ಪರಿಶೀಲನೆ ನಡೆಸಲು ನಿಗದಿಪಡಿಸಲಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ತ್ವರಿತ ಅಂಚೆ ಮೂಲಕ 
ಕಳುಹಿಸಲಾಗಿದೆ.

Advertisement

Advertisement

ಇದನ್ನೂ ಓದಿ: [PM Kisan Yojana: ರೈತರೇ 14ನೇ ಪಿಎಂ ಕಿಸಾನ್‌ ಯೋಜನೆ ಕಂತಿನ ಬಿಡುಗಡೆಗೆ ಮೊದಲು ಈ ಕೆಲಸ ಮಾಡಿ!](https://hosakannada.com/2023/04/20/pm-kisan-samman-yojana-update/)

Advertisement
