# KPSC : 1323 SDA ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

- Link: https://hosakannada.com/jobs/kpsc-1323-sda-post-important-message/
- Published: 2022-08-24T18:53:10+00:00
- Author: Mallika

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ 
ನೇಮಕಾತಿ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಆಗಸ್ಟ್ 25 ರಂದು ಪ್ರಕಟಿಸಲಿದೆ.

Sponsored

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದ 1,323 ಕಿರಿಯ ಸಹಾಯಕರ ನೇಮಕಾತಿಗೆ 2019-20 ನೇ ಸಾಲಿನಲ್ಲಿ
ಅಧಿಸೂಚನೆ ಹೊರಡಿಸಿ 2021 ರ ಸೆ. 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ
ಮೌಲ್ಯಮಾಪನ ಮುಗಿದಿದ್ದು, ಆಗಸ್ಟ್ 25 ರಂದು ಅರ್ಹತಾ ಪಟ್ಟಿ ಪ್ರಕಟಿಸುವುದಾಗಿ ಕೆಪಿಎಸ್ ಸಿ ಕಾರ್ಯದರ್ಶಿ
ಕಿಶೋರ್ ವಿಕಾಸ್ ಸುರಸ್ಕರ್ ತಿಳಿಸಿದ್ದಾರೆ.

Advertisement

Advertisement

ಇನ್ನು ಗ್ರೂಪ್ ಎ ಹುದ್ದೆಯಾದ 2019-20 ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ (ACF) ತಾತ್ಕಾಲಿಕ
ಅರ್ಹತಾ ಪಟ್ಟಿ ನವೆಂಬರ್ 30 ರಂದು ಪ್ರಕಟವಾಗಲಿದೆ.

Advertisement
