# ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಹುದ್ದೆ | ಆಸಕ್ತರು ಅರ್ಜಿ ಸಲ್ಲಿಸಿ, ಮಾಸಿಕ ವೇತನ ರೂ.50ಸಾವಿರ

- Link: https://hosakannada.com/jobs/kea-recruitment-2023-apply-for-2-programmer-posts/
- Published: 2023-01-10T21:07:17+00:00
- Author: Mallika

KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examinations Authority)
ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ
ಸಲ್ಲಿಸಬಹುದು. ಇದು ಕರ್ನಾಟಕ ಸರಕಾರದ ಉದ್ಯೋಗವಾಗಿದ್ದು ಬೆಂಗಳೂರಿನಲ್ಲಿ ವೃತ್ತಿ ಮಾಡಲು ಬಯಸುವವರಿಗೆ
ಒಳ್ಳೆಯ ಅವಕಾಶ ಎಂದೇ ಹೇಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 14, 2023 ಕೊನೆಯ ದಿನವಾಗಿದ್ದು,
ಅಭ್ಯರ್ಥಿಗಳು ಕೂಡಲೇ ಇ-ಮೇಲ್ ಮಾಡಬಹುದು.

Sponsored

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: 14/01/2023ಪ್ರಾಯೋಗಿಕ
ಪರೀಕ್ಷೆ ನಡೆಯುವ ದಿನಾಂಕ: ಜನವರಿ 17, 2023

Advertisement

Advertisement

ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆ : ಪ್ರೋಗ್ರಾಮರ್ಒಟ್ಟು ಹುದ್ದೆ : 2ವೇತನ ಮಾಸಿಕ:
₹ 25,000-50,000ಉದ್ಯೋಗದ ಸ್ಥಳ : ಬೆಂಗಳೂರು

ಹುದ್ದೆಯ ಮಾಹಿತಿ : ಪ್ರೋಗ್ರಾಮರ್ -1, ಪ್ರೋಗ್ರಾಮರ್ (ಫ್ರೆಶರ್)- 1 ಹುದ್ದೆಗಳನ್ನು ಭರ್ತಿ ಮಾಡಲು
ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು -ಬಿಇ/ಬಿ.ಟೆಕ್ CSE/ITಯಲ್ಲಿ
ಎಂಟೆಕ್, ಎಂಎಸ್ಸಿ, ಎಂಸಿಎ ತೇರ್ಗಡೆ ಹೊಂದಿರಬೇಕು. ಪ್ರೋಗ್ರಾಮರ್ (ಫ್ರೆಶರ್) ಈ ಹುದ್ದೆಗೆ ಅರ್ಜಿ
ಸಲ್ಲಿಸುವ ಅಭ್ಯರ್ಥಿಗಳು ಬಿಸಿಎ ಮಾಡಿರಬೇಕು. ಅಭ್ಯರ್ಥಿಗಳು ವೆಬ್ಲಾಜಿಕ್ ಸರ್ವರ್‌ನಲ್ಲಿ ನಮೂನೆಗಳು
ಮತ್ತು ವರದಿಗಳೊಂದಿಗೆ Oracle 12 C ನಲ್ಲಿ 02 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.

ವಯೋಮಿತಿ : ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿಲ್ಲ.

ವೇತನ: ಪ್ರೋಗ್ರಾಮರ್ -ಮಾಸಿಕ ₹ 50,000, ಪ್ರೋಗ್ರಾಮರ್ (ಫ್ರೆಶರ್)- ಮಾಸಿಕ ₹ 25,000 ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@
gmail.com ಗೆ ಜನವರಿ 14ರೊಳಗೆ ಕಳುಹಿಸಲು ಸೂಚಿಸಲಾಗಿದೆ.

Advertisement
