# ‘ಕರ್ನಾಟಕ ವಿಧಾನಸಭೆ ಸಚಿವಾಲಯ’ದಲ್ಲಿ ಖಾಲಿ ಇರುವ 43 ಹುದ್ದೆಗಳಿಗೆ ಅರ್ಜಿ ಆಹ್ವಾನ

- Link: https://hosakannada.com/jobs/karnataka-legislative-assembly-recruitment-2022/
- Published: 2022-04-28T06:00:00+00:00
- Author: Mallika

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲದಲ್ಲಿ  ವೃಂದದಲ್ಲಿನ ವಿವಿಧ ವೃಂದಗಳ 43 ಹುದ್ದೆಗಳಿಗೆ ನೇರ
ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

Sponsored

ಹುದ್ದೆಗಳ ವಿವರ :
•ವರದಿಗಾರರು – 02•ಕಂಪ್ಯೂಟರ್ ಆಪರೇಟರ್ – 04•ಕಿರಿಯ ಸಹಾಯಕರು – 10• ಬೆರಳಚ್ಚುಗಾರರು–
01• ದಲಾಯತ್ – 26

Advertisement

Advertisement

ವೇತನ :  ವರದಿಗಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.37,900 ರಿಂದ ರೂ.
70,850,  ಕಂಪ್ಯೂಟರ್ ಆಪರೇಟರ್ – ರೂ.30,350 ರಿಂದ ರೂ.58,250, ಕಿರಿಯ ಸಹಾಯಕರು – ರೂ.21,400
ರಿಂದ ರೂ.42,000/-, ಬೆರಳಚ್ಚುಗಾರರು – ರೂ.21,400 ರಿಂದ 42,000, ದಲಾಯತ್ ರೂ. 17,000 ರಿಂದ 
ರೂ.28,950/-

ವಿದ್ಯಾರ್ಹತೆ : ಕನ್ನಡ ವರದಿಗಾರರಿಗೆ ಯಾವುದೇ ಅಂಗೀಕೃತ ವಿವಿಯಿಂದ ಪದವಿ,  ಕನ್ನಡ ಶೀಘ್ರಲಿಪಿಗಾರ,
ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕಂಪ್ಯೂಟರ್ ಆಪರೇಟರ್ – ಯಾವುದೇ ವಿವಿಯಿಂದ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಬ್ಯಾಚಲರ್ಸ್ ಪದವಿ ಅಥವಾ
ಬಿಎಸ್ಸಿ ಕಂಪ್ಯೂಟರ್ ಸೈನ್ಸ್.
ಕಿರಿಯ ಸಹಾಯಕರು – ಪದವಿ ಜೊತೆಗೆ ಗಣಕಯತಂತ್ರ ಸಾಮಾನ್ಯ ಜ್ಞಾನ ಹೊಂದಿರಬೇಕು.
ಬೆರಳಚ್ಚುಗಾರರು – ಎಸ್ಎಸ್ ಎಲ್ ಸಿ ತತ್ಸಮಾನಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಗಣಕಯಂತ್ರದ ಕನಿಷ್ಠ
1 ವರ್ಷ ತರಬೇತಿದಲಾಯತ್ – 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ – ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ 38 ವರ್ಷ, 
ಪರಿಶಿಷ್ಟ ಜಾರಿ, ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಉಳಿದ ಸಾಮಾನ್ಯ ವರ್ಗದ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ರಾಸ್ ಮಾಡಿದ ರೂ.500ರ ಇಂಡಿಯನ್
ಪೋಸ್ಟಲ್ ಆರ್ಡರ್ ಅನ್ನು, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದನೇ ಮಹಡಿ, ವಿಧಾನಸೌಧ,
ಬೆಂಗಳೂರು –[560001](https://hosakannada.com/jobs/karnataka-legislative-assembly-recruitment-2022/560001)
ಗೆ ಪಾವತಿಸಬೇಕು.

ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಸೂಕ್ತ ನಮೂನೆಯ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಭರ್ತಿ ಮಾಡಿ, ಜೊತೆಗೆ
ಸಂಬಂಧಿಸಿದಂತ ದಾಖಲೆಗಳ ಸಹಿತ ದ್ವಿಪ್ರತಿಯಲ್ಲಿ ದಿನಾಂಕ [27-05-2022](https://hosakannada.com/jobs/karnataka-legislative-assembly-recruitment-2022/27052022)
ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 5074, ಮೊದಲನೇ 
ಮಹಡಿ, ವಿಧಾನಸೌಧ ಬೆಂಗಳೂರು – [560001](https://hosakannada.com/jobs/karnataka-legislative-assembly-recruitment-2022/560001)
ಗೆ ಸಲ್ಲಿಸಬೇಕು.

Advertisement
