# Job Alert: ದಕ್ಷಿಣ ಕನ್ನಡದಲ್ಲಿ ಉದ್ಯೋಗವಕಾಶ, ಮಾಸಿಕ ರೂ.20,000 ವೇತನ; ನೇರ ಸಂದರ್ಶನ

- Link: https://hosakannada.com/jobs/job-alert-from-cpcri-recruitment-2023-apply-for-project-fellow-post/
- Published: 2023-02-26T18:15:45+00:00
- Author: ಕಾವ್ಯ ವಾಣಿ

Job Alert : ಸರ್ಕಾರಿ ಹುದ್ದೆ (government job )ಹುಡುಕುತ್ತಿರುವರಿಗೆ ಸುವರ್ಣ ಅವಕಾಶ ಒಂದನ್ನು
ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ನೀಡಿದೆ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ
ಸಂಸ್ಥೆ ಯಲ್ಲಿ ( Central Plantation Crops Research Institute-CPCRI) ಇರುವ ಖಾಲಿ ಇರುವ
ಹುದ್ದೆ( Job Alert) ಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ(application)
ಆಹ್ವಾನಿಸಿದೆ.

Sponsored

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ( Central Plantation Crops Research Institute-
CPCRI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು
ಒಟ್ಟು 1 ಪ್ರಾಜೆಕ್ಟ್​ ಫೆಲೋ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

Advertisement

Advertisement

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ದಕ್ಷಿಣ ಕನ್ನಡದಲ್ಲಿ(Dakshina Kannada) ಪೋಸ್ಟಿಂಗ್ ನೀಡಲಾಗುತ್ತದೆ.
ಇದೇ ಮಾರ್ಚ್​ 6, 2023ರಂದು ಬೆಳಗ್ಗೆ 9 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ
ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಕುರಿತಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ:

• ಸಂಸ್ಥೆ : ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ
 • ಹುದ್ದೆ : ಪ್ರಾಜೆಕ್ಟ್​ ಫೆಲೋ•
ಒಟ್ಟು ಹುದ್ದೆ : 1 • ವಿದ್ಯಾರ್ಹತೆ : ಬಿ.ಎಸ್ಸಿ, ಅಂದರೆ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್
ಇನ್​ಸ್ಟಿಟ್ಯೂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/
ಮಂಡಳಿಯಿಂದ ಕಡ್ಡಾಯವಾಗಿ ಬಿಎಸ್ಸಿ ಪೂರ್ಣಗೊಳಿಸಿರಬೇಕು. • ವೇತನ ಮಾಸಿಕ: ₹ 20,000 • ಉದ್ಯೋಗದ 
ಸ್ಥಳ : ದಕ್ಷಿಣ ಕನ್ನಡ • ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ(exam )ಜೊತೆಗೆ ಸಂದರ್ಶನ • ಸಂದರ್ಶನ
ನಡೆಯುವ ಸ್ಥಳ: ICAR-CPCRI,ಪ್ರಾದೇಶಿಕ ಠಾಣೆ-ವಿಟ್ಲ, ಬಂಟ್ವಾಳ ತಾಲೂಕು,ದಕ್ಷಿಣ ಕನ್ನಡ ಜಿಲ್ಲೆ,
ಕರ್ನಾಟಕ. • ಪ್ರಮುಖ ದಿನಾಂಕಗಳು: ನೋಟಿಫಿಕೇಶನ್ ಬಿಡುಗಡೆ ದಿನಾಂಕ: 22/02/2023 • ಸಂದರ್ಶನ ನಡೆಯುವ
ದಿನಾಂಕ: ಮಾರ್ಚ್​ 6, 2023 ಬೆಳಗ್ಗೆ 9 ಗಂಟೆಗೆ

ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್​ಸ್ಟಿಟ್ಯೂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ
ವಯಸ್ಸು ಫೆಬ್ರವರಿ 28, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮಹಿಳಾ
ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಹುದ್ದೆಯಲ್ಲಿ ಅರ್ಹ ಇರುವ ಅಭ್ಯರ್ಥಿಗಳು,
ನಿಯಮನುಸಾರ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

Advertisement
