# India post recruitment 2022 | SSLC ಪಾಸಾದವರಿಗೆ ಉದ್ಯೋಗ, ಅರ್ಜಿ ಸಲ್ಲಿಸಲು ಕೊನೆ ದಿನ-ಜುಲೈ 20

- Link: https://hosakannada.com/jobs/india-post-recruitment-2022/
- Published: 2022-06-28T10:00:55+00:00
- Author: ಹೊಸಕನ್ನಡ ನ್ಯೂಸ್

ಭಾರತೀಯ ಅಂಚೆ ಇಲಾಖೆಯು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಹ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Sponsored

**ಖಾಲಿ ಹುದ್ದೆಗಳ ವಿವರಗಳು**:
ಒಟ್ಟು ಹುದ್ದೆಗಳ ಸಂಖ್ಯೆ- 24

Advertisement

Advertisement

**ಅರ್ಹತಾ ಮಾನದಂಡಗಳು:**
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತರಗತಿಯಲ್ಲಿ
ಉತ್ತೀರ್ಣರಾಗಿರಬೇಕು. ಅಂದರೆ ಎಸ್​ಎಸ್​ಎಲ್​ಸಿ ಪಾಸಾದ, ಡ್ರೈವಿಂಗ್ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

**ವಯೋಮಿತಿ**:
ಅಂಚೆ ಇಲಾಖೆಯ ಡ್ರೈವರ್​ ಹುದ್ದೆಗಳಿಗೆ 56 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ 
ಸಲ್ಲಿಸಬಹುದಾಗಿದೆ.

**ಪ್ರಮುಖ ದಿನಾಂಕ:**
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20, 2022 ರಂದು 
ನಿಗದಿ ಮಾಡಲಾಗಿದೆ.

**ಅರ್ಜಿ ಸಲ್ಲಿಸುವುದು ಹೇಗೆ?**
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು
ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ [indiapost.gov.in](http://indiapost.gov.in) ಗೆ
ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿಯನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡುವ 
ಮೂಲಕ ಅಂಚೆ ಮೂಲಕ ಕಳುಹಿಸಿಕೊಡಬಹುದು. ಅಂಚೆಯ ಮೂಲಕ ಅರ್ಜಿ ಕಳಿಸಬೇಕಾದ ವಿಳಾಸ ಈ ಕೆಳಗಿನಂತಿದೆ.

**ಅರ್ಜಿ ಕಳುಹಿಸಬೇಕಾದ ವಿಳಾಸ**:
The Senior Manager (JAG), Mail Motor Service, No. 37,
Greams Road, Chennai- [600006](https://hosakannada.com/jobs/india-post-recruitment-2022/600006).

Advertisement
