# Postal Circle Driver Recruitment: ಕರ್ನಾಟಕ ಅಂಚೆಯಲ್ಲಿ ಉದ್ಯೋಗವಕಾಶ! ಸೆ.15 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ!

- Link: https://hosakannada.com/jobs/government-jobs-karnataka-postal-circle-driver-recruitment-2023-how-to-apply-for-karnataka-post-driver-jobs/
- Published: 2023-08-17T16:59:54+00:00
- Author: ಹೊಸಕನ್ನಡ ನ್ಯೂಸ್

Postal Circle Driver Recruitment : ಕರ್ನಾಟಕ ಅಂಚೆ ವೃತ್ತದ ವಿವಿಧ ಡಿವಿಷನ್‌ಗಳಲ್ಲಿ ಚಾಲಕ
ಹುದ್ದೆಯು(Postal Circle Driver Recruitment) ಖಾಲಿಯಿದ್ದು,ಇದರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಸೆಪ್ಟೆಂಬರ್ 15 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Sponsored

**ಹುದ್ದೆ ಹೆಸರು** : ಚಾಲಕರು
 **ಹುದ್ದೆಗಳ ಸಂಖ್ಯೆ** : 28 **ಉದ್ಯೋಗ ಇಲಾಖೆ** : ಅಂಚೆ ಇಲಾಖೆ**
ನೇಮಕಾತಿ ಪ್ರಾಧಿಕಾರ** : ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿ

Advertisement

Advertisement

ಅಂಚೆ ಇಲಾಖೆಯು ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿಗೆ ಇದೀಗ ಖಾಲಿ ಇರುವ ಚಾಲಕ 
ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಕೊನೆಯ
ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
 ಅರ್ಜಿ ನಮೂನೆಯನ್ನು ಇಂಡಿಯನ್‌ ಪೋಸ್ಟ್‌ ಅಧಿಕೃತ ವೆಬ್‌ಸೈಟ್‌
[www.indianpost.gov.in](http://www.indianpost.gov.in) ನಲ್ಲಿ ಪಡೆಯಬಹುದು. ಇಲ್ಲವೇ ಸದರಿ
ಕಚೇರಿಯಲ್ಲಿ ಕೂಡ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳ ಜೊತೆಗೆ ಕೆಳಗಿನ
ವಿಳಾಸಕ್ಕೆ ಸೆಪ್ಟೆಂಬರ್ 15, 2023 ಕ್ಕೆ ತಲುಪುವ ಹಾಗೆ ಕಳುಹಿಸಬೇಕು. **ಅರ್ಜಿ ಸಲ್ಲಿಸಬೇಕಾದ ವಿಳಾಸ**:
The Manager, Mail Motor Service, Bengaluru- 560001.

**ಚಾಲಕ ಹುದ್ದೆಗಳ ಪಟ್ಟಿ.**
 ಹುದ್ದೆಗಳ ಸಂಖ್ಯೆ ಚಿಕ್ಕೋಡಿ- 1 ಕಲಬುರಗಿ- 1 ಧಾರವಾಡ- 1 ಗದಗ- 
1 ಕಾರವಾರ- 1 ಎಂಎಂಎಸ್ ಬೆಂಗಳೂರು-15 ಮಂಡ್ಯ-1 ಮೈಸೂರು-3 ಪುತ್ತೂರು- 1 ಶಿವಮೊಗ್ಗ- 1 ಉಡುಪಿ-1
ಕೋಲಾರ- 1 ಒಟ್ಟು- 28

**ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ಹೀಗಿವೆ:**
 ಎಸ್‌ಎಸ್‌ಎಲ್‌ಸಿ / 10th ಪಾಸಾಗಿರಬೇಕು.ಲಘು
ವಾಹನ / ಭಾರೀ ವಾಹನ ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್‌) ಹೊಂದಿರಬೇಕು. ಮೋಟಾರು ಮೆಕ್ಯಾನಿಷಮ್
ಅರಿವು ಇರಬೇಕು.ಕನಿಷ್ಠ 3 ವರ್ಷಗಳ ಲಘು ವಾಹನ / ಭಾರೀ ವಾಹನ ಚಾಲನೆಯ ಅನುಭವ ಹೊಂದಿರಬೇಕು. ಹೋಮ್‌
ಗಾರ್ಡ್‌, ನಾಗರಿಕ ಸ್ವಯಂ ಸೇವಕರು, ಸಶಸ್ತ್ರ ಪಡೆಗಳ ಮಾಜಿ ಸಿಬ್ಬಂದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವಯಸ್ಸಿನ ಅರ್ಹತೆ ಗಮನಿಸಿದರೆ, ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಗರಿಷ್ಠ 56 ವರ್ಷ ವಯಸ್ಸು ಮೀರಿರಬಾರದು.

ಮೊದಲಿಗೆ 2 ವರ್ಷಗಳಿಗೆ ಪ್ರೊಬೇಷನ್‌ ಅವಧಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ 
3 ವರ್ಷ ಹುದ್ದೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. 7ನೇ ವೇತನ ಆಯೋಗದ ಅನುಸಾರ, ರೂ.19,900-63,200
ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: [ಅತ್ತಿಗೆ ಮೇಲೆ ಕಣ್ಣು ಹಾಕಿದ ಸ್ನೇಹಿತ! ಅನಂತರ ನಡೆದದ್ದೇ ಅನಾಹುತ!](https://hosakannada.com/2023/08/17/belagavi-death-news-man-murder-the-life-partner-in-belagavi/)

Advertisement
