# Cooking Job : ಅಡುಗೆಯಲ್ಲಿ ಪರಿಣತಿ ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್!ಕುಕ್ ಕೆಲಸಕ್ಕೆ ಮಾಸಿಕ 32 ಸಾವಿರ ಸಂಬಳ!

- Link: https://hosakannada.com/jobs/expertise-in-cooking-are-invited-to-apply-for-cooking-job/
- Published: 2023-04-10T10:25:21+00:00
- Author: ಕಾವ್ಯ ವಾಣಿ

cooking job : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ
ಆಹ್ವಾನಿಸಲಾಗಿದೆ (Job Alert) . ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ಹುದ್ದೆಗಳಾದ
ಟೆಕ್ನಿಷಿಯನ್ ಮತ್ತು ಕುಕ್ (cooking job) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Sponsored

ಒಟ್ಟು 4 ಟೆಕ್ನಿಷಿಯನ್, ಕುಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
 ಅಭ್ಯರ್ಥಿಗಳ
ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ
ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Advertisement

Advertisement

ವೇತನ :
 ಟೆಕ್ನಿಷಿಯನ್ ಹುದ್ದೆಗೆ : ಮಾಸಿಕ 27,650- 52,650 ಕುಕ್/ ಅಸಿಸ್ಟೆಂಟ್ ಕುಕ್ ಹುದ್ದೆಗೆ:
ಮಾಸಿಕ 18,600-32,600 ನೀಡಲಾಗುತ್ತದೆ.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು 
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ರಿಜಿಸ್ಟ್ರಾರ್, ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳ ಗಂಗೋತ್ರಿ-574199, ದಕ್ಷಿಣ ಕನ್ನಡ, ಕರ್ನಾಟಕ ಇಲ್ಲಿಗೆ ಕಳುಹಿಸಬಹುದಾಗಿದೆ.

ಆಯ್ಕೆಯಾಗುವ ಅಭ್ಯರ್ಥಿಗಳು ಮಂಗಳೂರಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್
10, 2023 ಕೊನೆಯ ದಿನಾಂಕವಾಗಿದೆ.

 

ಇದನ್ನು ಓದಿ : [Juice in summer : ಬೇಸಿಗೆಗೆ ಈ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು! ಯಾವುದೆಲ್ಲ ಗೊತ್ತಾ?](https://hosakannada.com/2023/04/10/do-you-know-how-good-it-is-to-drink-this-juice-in-summer/)

Advertisement
