# ತಿಂಡಿಪೋತ ಕಳ್ಳ ! ತಿಂಡಿ ತಿಂದು, ಬಿಯರ್ ಕುಡಿದು, ಸ್ನಾನ ಮಾಡಿ 15 ಸಾವಿರ ರೂ. ಇಟ್ಟು ಹೋದ

- Link: https://hosakannada.com/international/mexico-kalla/
- Published: 2022-02-09T07:41:45+00:00
- Author: Praveen Chennavara

ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ತಿಂಡಿ ತಿಂದು ಬಿಯರ್ ಕುಡಿದು ತಾನು ಕದ್ದ ದುಡ್ಡನ್ನು ಮನೆಯೊಳಕ್ಕೆ
ಇಟ್ಟು ಹೋಗಿದ್ದಾನೆ.

Sponsored

ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಇದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ.

Advertisement

Advertisement

ಶಸ್ತ್ರಸಜ್ಜಿತ ಕಳ್ಳನೊಬ್ಬ ಯಾರೂ ಇಲ್ಲದ ಮನೆಯೊಳಗೆ ಕಿಟಕಿ ಮುರಿದು ಒಳಗೆ ನುಗ್ಗಿದ್ದು,ಆ ಮನೆಯಲ್ಲಿಯೇ
ಸ್ನಾನ ಮುಗಿಸಿ,ತಿಂಡಿ-ತಿನಿಸು ಮಾಡಿದ್ದಾನೆ. ಮನೆಯಲ್ಲಿದ್ದ ಬಿಯರ್ ಕುಡಿದು ಮಲಗಿದ್ದಾನೆ.

ಮಲಗಿ ಬೆಳಗ್ಗೆ ಎದ್ದು ಹೋಗಿದ್ದಾನೆ. ಈ ವರ್ತನೆ ಕಂಡು ಮನೆಯವರಿಗೆ ಶಾಕ್ ಆಗಿದೆ.

ಲಗುಬಗೆಯಿಂದ ಮನೆಯಲ್ಲಿ ಇಟ್ಟಿದ್ದ ನಗದು, ಆಭರಣಗಳನ್ನು ಪರೀಕ್ಷಿಸಿದ್ದಾರೆ. ಆದರೆ ಅವರಿಗೆ ಶಾಕ್ 
ಆಗಿದೆ.

ಮನೆಯಲ್ಲಿದ್ದ ತಿಂಡಿ ಖಾಲಿಯಾಗಿದ್ದರೂ, ಹಣ-ಒಡವೆ ಮಾತ್ರ ಸರಿಯಾಗಿಯೇ ಇತ್ತು. ಅಲ್ಲದೇ ಟೇಬಲ್ ಮೇಲೆ
200 ಡಾಲರ್ (ಸುಮಾರು 15 ಸಾವಿರ ರೂಪಾಯಿ) ಇತ್ತು!

Advertisement
