# ಬೃಹತ್ ಭೂಕಂಪಕ್ಕೆ ನಲುಗಿದ ಕಟ್ಟಡ ರಸ್ತೆ | ಸ್ವಿಮ್ಮಿಂಗ್ ಫುಲ್ ನಲ್ಲೂ ಸುನಾಮಿ – ಭಯಾನಕ ವೀಡಿಯೋ ವೈರಲ್

- Link: https://hosakannada.com/international/earthquake-matter/
- Published: 2022-09-20T12:55:07+00:00
- Author: ಹೊಸಕನ್ನಡ ನ್ಯೂಸ್

ಮೆಕ್ಸಿಕೋದಲ್ಲಿ ನಿನ್ನೆ ಬೃಹತ್ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದರೆ, ಸ್ವಿಮ್ಮಿಂಗ್ 
ಫುಲ್ ನಲ್ಲಿ ಸುನಾಮಿಯೇ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದ್ದು,
ಮೈ ಜುಮ್ ಅನಿಸುವಂತಿದೆ.

Sponsored

ಈ ಘಟನೆ ಪೆಸಿಫಿಕ್​ ಕರಾವಳಿಯಲ್ಲಿ ಸೋಮವಾರ ಸಂಭವಿಸಿದೆ. ಕಟ್ಟಡವೊಂದರ ಮೇಲಿರುವ ಈಜುಕೊಳದ ದೃಶ್ಯವನ್ನು
ನೆಟ್ಟಿಗರೊಬ್ಬ ಹಂಚಿಕೊಂಡಿದ್ದು, ಸ್ವಮ್ಮಿಂಗ್​ಪೂಲ್​ನಲ್ಲಿ ಮಿನಿ ಸುನಾಮಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಭೂಕಂಪನಕ್ಕೆ ಕಟ್ಟಡ ಅಲುಗಾಡಿದ ಪರಿಣಾಮ ಕಟ್ಟಡದ ಮೇಲಿಂದ ನೀರು ಕೆಳಗೆ ಚೆಲ್ಲುತ್ತಿರುವ
ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಹೋಟೆಲ್​ ಒಂದರ ಕೊಠಡಿಯೊಳಗೆ ಫ್ಯಾನ್​ ಅಲುಗಾಡುತ್ತಿರುವ ದೃಶ್ಯವಿದೆ.
ಮಗದೊಂದು ವಿಡಿಯೋದಲ್ಲಿ ಭೂಂಕಪನಕ್ಕೆ ಪಾರ್ಕ್​ ಮಾಡಿರುವ ಕಾರುಗಳು ಸಹ ಅಲುಗಾಡುತ್ತಿವೆ. ಒಟ್ಟಾರೆ
ಈ ವೀಡಿಯೋಗಳು ಜನರನ್ನೇ ಬೆಚ್ಚಿಬೀಳಿಸಿದೆ.

Advertisement

Advertisement

ಯುನೈಟೆಡ್​ ಸ್ಟೇಟ್ಸ್​ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.05ರ ಸುಮಾರಿಗೆ
7.5 ತೀವ್ರತೆಯ ಪ್ರಬಲ ಭೂಕಂಪನವು ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ
37 ಕಿಲೋಮೀಟರ್ ದೂರದಲ್ಲಿ ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಬಳಿ ಕೇಂದ್ರೀಕೃತವಾಗಿತ್ತು ಎಂದು
ತಿಳಿದುಬಂದಿದೆ.

> Tras el fuerte sismo el agua de algunas albercas caían de los edificios de av 
> Vallarta [#temblorgdl](https://x.com/hashtag/temblorgdl?src=hash&ref_src=twsrc%5Etfw)
> [@Trafico_ZMG](https://x.com/Trafico_ZMG?ref_src=twsrc%5Etfw) [@Metropoli1150](https://x.com/Metropoli1150?ref_src=twsrc%5Etfw)
> [#sismo](https://x.com/hashtag/sismo?src=hash&ref_src=twsrc%5Etfw) [pic.twitter.com/Jjah22XLs6](https://t.co/Jjah22XLs6)
> — Callie Abbott (@gusdegdl) [September 19, 2022](https://x.com/gusdegdl/status/1571937559101542403?ref_src=twsrc%5Etfw)

> Alberca en el último piso en Reforma 27 [#Temblor](https://x.com/hashtag/Temblor?src=hash&ref_src=twsrc%5Etfw)
> en la [#CDMX](https://x.com/hashtag/CDMX?src=hash&ref_src=twsrc%5Etfw) 🇲🇽🕷[@andresguzbj](https://x.com/andresguzbj?ref_src=twsrc%5Etfw)
> [pic.twitter.com/TWUcVBBcFo](https://t.co/TWUcVBBcFo)
> — Crónicas de la Ciudad Perdida Oscar Blanco CDMX (@OscarBlancoCdmx) [September 19, 2022](https://x.com/OscarBlancoCdmx/status/1571972347690721280?ref_src=twsrc%5Etfw)

Advertisement
