# ಟ್ರಂಪ್ ಹತ್ಯೆ ಮಾಡಿದವರಿಗೆ 560 ಕೋಟಿ ರೂ. ಬಹುಮಾನ – ಸದ್ಯದಲ್ಲೇ ಇರಾನ್ ಸಂಸತ್ತಿನಲ್ಲಿ ಹೊಸ ಮಸೂದೆ ಮಂಡನೆ

- Link: https://hosakannada.com/international/560-crore-rupees-reward-for-those-who-kill-trump-new-bill-introduced-in-iranian-parliament/
- Published: 2026-05-17T12:26:21+00:00
- Author: ಹೊಸಕನ್ನಡ ನ್ಯೂಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡುವ ಯಾವುದೇ ವ್ಯಕ್ತಿ 
ಅಥವಾ ಸಂಸ್ಥೆಗೆ 50 ಮಿಲಿಯನ್ ಯುರೋ (ಸುಮಾರು 560 ಕೋಟಿ ರೂಪಾಯಿ) ಬಹುಮಾನ ನೀಡುವ ಮಸೂದೆಯೊಂದನ್ನು
ಮಂಡಿಸಲು ಇರಾನ್ ಸಿದ್ದತೆ ನಡೆಸಿದೆ ಎಂದು ಸಂಸದರೊಬ್ಬರು ತಿಳಿಸಿದ್ದಾರೆ.

Sponsored

ಹೌದು, ಇರಾನ್‌ನ ಹಿರಿಯ ಸಂಸದರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, “ನಮ್ಮ ಇಮಾಮ್ ಹೇಗೆ ಹುತಾತ್ಮರಾದರೋ,
ಅದೇ ರೀತಿ ಅಮೆರಿಕ ಅಧ್ಯಕ್ಷರನ್ನೂ ಎದುರಿಸಬೇಕು. ಹೀಗಾಗಿ ಟ್ರಂಪ್ ಹತ್ಯೆಗಾಗಿ ಈ ಬೃಹತ್ ಮೊತ್ತವನ್ನು
ಪಾವತಿಸಲು ಸರ್ಕಾರವನ್ನು ಒತ್ತಾಯಿಸುವ ಮಸೂದೆಯನ್ನು ಸಿದ್ಧಪಡಿಸಲಾಗುತ್ತಿದೆ. ಇರಾನ್‌ನ ಸರ್ವೋಚ್ಚ
ನಾಯಕರು ಮತ್ತು ಕಮಾಂಡರ್‌ಗಳ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಇರಾನ್ ಸರ್ಕಾರ ಈ ಕಠಿಣ ಕಾನೂನು
ಕ್ರಮಕ್ಕೆ ಮುಂದಾಗಿದೆ” ಎಂದು ತಿಳಿಸಿದ್ದಾರೆ.

Advertisement

Advertisement

Advertisement
