# Vastu for fish aquarium: ಮನೆಯಲ್ಲಿ ಮೀನನ್ನು ಸಾಕೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ ? ವಾಸ್ತು ಶಾಸ್ತ್ರ ಏನು ಹೇಳುತ್ತೆ ?

- Link: https://hosakannada.com/interesting/vastu-shastra-for-fish-aquarium/
- Published: 2023-06-04T12:33:04+00:00
- Author: ಹೊಸಕನ್ನಡ

Vastu for fish aquarium: ಅನೇಕರಿಗೆ ಮನೆಯಲ್ಲಿ ಮೀನು ಸಾಕುವ ಹವ್ಯಾಸವಿರುತ್ತದೆ. ಎಷ್ಟೋ ಜನ 
ಮನೆಯ ಮೀನಿನ ತೊಟ್ಟಿಯಲ್ಲಿ ವಿವಿಧ ಬಗೆಯ ಮೀನುಗಳನ್ನು ಇಡುತ್ತಾರೆ. ಫಿಶ್ ಟ್ಯಾಂಕ್ ಅಥವಾ ಅಕ್ವೇರಿಯಂ
ವಾಸ್ತುಶಾಸ್ತ್ರದಲ್ಲಿಯೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಮನೆಯಲ್ಲಿರುವ ಮೀನಿನ ತೊಟ್ಟಿಯು
ವ್ಯಕ್ತಿಯ ಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಮೀನು ಸಾಕೋದು ಕೇವ ಹವ್ಯಾಸವಲ್ಲ, ಅದರಲ್ಲಿ
ಹಲವು ರೀತಿಯ ಇತರ ಲಾಭಗಳಿವೆ.

Sponsored

ನಿಮ್ಮ ಮನೆಯಲ್ಲಿ ಅಕ್ವೇರಿಯಂ(Vastu for fish aquarium) ಇದ್ದರೆ, ನಕಾರಾತ್ಮಕ ಶಕ್ತಿಯು ನಿಮ್ಮ
ಮನೆಯಲ್ಲಿ ಸಂಚರಿಸುವುದಿಲ್ಲ. ಮೀನಿನ ತೊಟ್ಟಿಯಲ್ಲಿನ ನೀರಿನ ಶಬ್ದವು ಮನೆಯಲ್ಲಿ ಧನಾತ್ಮಕ ಶಕ್ತಿ 
ಮತ್ತು ಸಂತೋಷದ ಹರಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಮೀನಿನ ತೊಟ್ಟಿಯನ್ನು ಸರಿಯಾದ
ಜಾಗದಲ್ಲಿ ಇಟ್ಟರೆ ಮನೆಯೂ ಆರ್ಥಿಕವಾಗಿ ಏಳಿಗೆಯಾಗುತ್ತದೆ.

Advertisement

Advertisement

**ಮನೆಯಲ್ಲಿ ಮೀನಿನ ತೊಟ್ಟಿಯನ್ನು ಎಲ್ಲಿ ಇಟ್ಟರೆ ಲಾಭ :**

1. ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೀನಿನ ತೊಟ್ಟಿಯನ್ನು ಇಡುವುದು ಮಂಗಳಕರವೆಂದು
ಪರಿಗಣಿಸಲಾಗುತ್ತದೆ. ನೀರಿನ ಈ ದಿಕ್ಕುಗಳಲ್ಲಿ ತೊಟ್ಟಿಯನ್ನು ಇಡುವುದರಿಂದ ಆ ಜಾಗದಲ್ಲಿ ಧನಾತ್ಮಕ
ಶಕ್ತಿ ಹೆಚ್ಚುತ್ತದೆ.

2. ಮೀನಿನ ತೊಟ್ಟಿಯ ನೀರನ್ನು ನಿಯತಕಾಲಿಕವಾಗಿ ಬದಲಾಯಿಸಬೇಕು, ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು
ಸೃಷ್ಟಿಸುತ್ತದೆ.

3. ವಾಸ್ತು ಶಾಸ್ತ್ರದ ಪ್ರಕಾರ ಅಕ್ವೇರಿಯಂನಲ್ಲಿ ನೀರು ನಿಲ್ಲಬಾರದು, ಇಲ್ಲದಿದ್ದರೆ ಈ ನಿಶ್ಚಲತೆಯು
ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ.

4. ಒಳಾಂಗಣ ಮೀನಿನ ತೊಟ್ಟಿಗಳು ನಿರ್ದಿಷ್ಟ ಸಂಖ್ಯೆಯ ಮೀನುಗಳನ್ನು ಹೊಂದಿರಬೇಕು. ಮೀನಿನ ತೊಟ್ಟಿಯಲ್ಲಿ
9 ಮೀನುಗಳು, ಎಂಟು ಚಿನ್ನ ಮತ್ತು ಒಂದು ಕಪ್ಪು ಮೀನುಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

5. ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ ಬೇಕಾದರೆ ಮುಖ್ಯ ಬಾಗಿಲಿನ ಎಡಭಾಗದಲ್ಲಿ ಮೀನಿನ ತೊಟ್ಟಿಯನ್ನು
ಇಡಬೇಕು.

6. ಅಕ್ವೇರಿಯಂ ಅನ್ನು ನೋಡುತ್ತಾ ಅದರಲ್ಲಿರುವ ಮೀನುಗಳ ಚಲನವಲನಗಳನ್ನು ಗಮನಿಸುತ್ತಾ ಇರುವುದರಿಂದ
ಮಾನಸಿಕ ನೆಮ್ಮದಿ ಸಿಗುತ್ತದೆ. ಮೀನು ಸಹಿತ ಆಕ್ವೇರಿಯಂಗೆ ದುಗುಡಕೊಂಡ ಮನಸ್ಸನ್ನು ಶಾಂತಗೊಳಿಸುವ ‘
ಸೂದಿಂಗ್ ‘ ಮಾಡುವ ಗುಣವಿದೆ.

ಇದನ್ನೂ ಓದಿ: [Kakinada Accident: ಕಾಕಿನಾಡದಲ್ಲಿ ಭೀಕರ ದುರಂತ ; ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ನುಗ್ಗಿದ ಲಾರಿ; ಮೂವರ ದುರ್ಮರಣ!!](https://hosakannada.com/2023/06/04/kakinada-accident-lorry-entered-the-temple-3-dead/)

Advertisement
