# ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!

- Link: https://hosakannada.com/interesting/terrible/
- Published: 2022-03-19T14:23:04+00:00
- Author: ಹೊಸಕನ್ನಡ ನ್ಯೂಸ್

ಪ್ರಕೃತಿ ಒಂದು ಅಚ್ಚರಿ, ಅದ್ಭುತ, ವಿಸ್ಮಯ. ಅದೆಷ್ಟೋ ಅಪರೂಪದ ಪ್ರಾಣಿಗಳು, ಜೀವಿಗಳು ಇಲ್ಲಿ ಅಡಗಿವೆ.
ಅಪರೂಪದ ಜೀವಿಯೊಖದು ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಮೂಡಿಸಿದೆ. ತಿಳಿಯಿರಿ ಈ ಜೀವಿಯ ಬಗ್ಗೆ ಕುತೂಹಲಕಾರಿ
ಮಾಹಿತಿ

Sponsored

ಥೈಲ್ಯಾಂಡ್ ಜೌಗು ಪ್ರದೇಶದಲ್ಲಿ  ನಿಗೂಢ ‘ಫ್ಯೂರಿ ಗ್ರೀನ್ ಹಾವು ಪತ್ತೆಯಾಗಿದೆ. ಫ್ಯೂರಿ ಗ್ರೀನ್’
ಹಾವು ಥಾಯ್ಲೆಂಡ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಸಮೀಪದಲ್ಲಿ ಕಂಡಿದ್ದಾರೆ. ರೋಮದಿಂದ ಕೂಡಿದ 
ಈ ಹಸಿರು ಹಾವು ಈಶಾನ್ಯ ಥೈಲ್ಯಾಂಡ್‌ನ ಸಖೋನ್ ನಖೋನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸುಮಾರು ಎರಡು
ಅಡಿ ಉದ್ದವಿದೆ ಈ ಹಾವು.

Advertisement

Advertisement

ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್ನಿಂದ ಮಾಡಲ್ಪಟ್ಟಿದೆ ಎಂದು ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ.
ವೈಲ್ಡ್‌ಲೈಫ್ ಎಆರ್‌ಸಿಯಲ್ಲಿ ಹಾವಿನ ಜಾತಿಯ ಸಂಯೋಜಕರಾಗಿರುವ ಸ್ಯಾಮ್ ಚಾಟ್‌ಫೀಲ್ಡ್, ಈ ಹಾವನ್ನು
ಪಪ್ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ. ಪಫ್ ಮುಖದ ನೀರಿನ ಹಾವುಗಳು ಸಾಮಾನ್ಯವಾಗಿ ಗಾಢ 
ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತವೆ.

ಈ ಜಾತಿಗಳು ಥೈಲ್ಯಾಂಡ್, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲಿ
ಕಂಡುಬರುತ್ತವೆ ಮತ್ತು ಕೊಳಗಳು, ಜೌಗು ಪ್ರದೇಶಗಳು ಮತ್ತು ಕಾಡಿನ ತೊರೆಗಳಂತಹ ಸಿಹಿನೀರಿನ ಪ್ರದೇಶದಲ್ಲಿ
ವಾಸಿಸುತ್ತವೆ. ಈ ಹಾವು ಸಣ್ಣ ಮೀನು ಅಥವಾ ಕಪ್ಪೆಗಳನ್ನು ತಿನ್ನುತ್ತವೆ. ಪಫ್ ಮುಖದ ನೀರಿನ ಹಾವುಗಳು
ಸ್ವಲ್ಪ ವಿಷಕಾರಿ ಮತ್ತು ಪ್ರಾಥಮಿಕವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ ಎನ್ನಲಾಗಿದೆ.

Advertisement
