# ಕೊಚ್ಚೆ ಅಂಟಿಕೊಂಡ ಹರಿದ ಶೂ ಅಲ್ಲ ಇದು ! ಲಕ್ಷ ಬೆಲೆ ಬಾಳುವ ಬ್ರಾಂಡೆಡ್ ಶೂ

- Link: https://hosakannada.com/interesting/brand-shoe/
- Published: 2022-05-13T08:25:51+00:00
- Author: Praveen Chennavara

ಸಾಮಾನ್ಯವಾಗಿ ಹರಿದ ಬಟ್ಟೆ, ಶೂಗಳಿದ್ದರೆ ಅದನ್ನು ಎಸೆದು ಬಿಡುತ್ತೇವೆ. ಆದರೀಗ ಹರಿದ ಶೂ, ಬಟ್ಟೆಯೆಂದರೆ
ಫ್ಯಾಷನ್ ಆಗಿದೆ. ಬಹುತೇಕರು ಇಂತಹ ಫ್ಯಾಷನ್ ಅನ್ನು ಇಷ್ಟಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಸೈಲಿಗೆ
ಒಗ್ಗಿಕೊಳ್ಳುತ್ತಿದ್ದಾರೆ. ಅದರಂತೆಯೇ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವ Balenciaga ಹರಿದ ಮತ್ತು
ತುಂಬಾ ಹಳೆಯದಾಗಿ ಕಾಣುವ ಶೂ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Sponsored

ಅಚ್ಚರಿಯ ವಿಚಾರವೆಂದರೆ, ಈ ಶೂವಿನ ಬೆಲೆ ಎಷ್ಟೆಂದರೆ ಜನರು ಇದನ್ನು ಖರೀದಿ ಮಾಡುವ ಹಣದಲ್ಲಿ ದ್ವಿಚಕ್ರ
ವಾಹನ ಖರೀದಿಸಬಹುದು. ಹೌದು, Balenciaga ಅವರ ಹೊಸ ಸೂಪರ್-ಡಿಸೆಸ್ ಶೂಗಳನ್ನು ನೋಡಿದ ನಂತರ, ಬಳಕೆದಾರರು
ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

Advertisement

Advertisement

ಬಾಲೆನ್ಸಿಯಾಗ ಶೂಗಳನ್ನು ‘ಪ್ಯಾರಿಸ್ ಸ್ಪೀಕರ್‌ ಸಂಗ್ರಹ ಎಂದು ಕರೆಯಲಾಗುತ್ತದೆ. ಸಂಪೂರ್ಣ ಹರಿದಿರುವ
ನೂರು ಜೋಡಿ ಶೂಗಳನ್ನು ಮಾತ್ರ ಕಂಪನಿ ಮಾರುಕಟ್ಟೆಗೆ ತಂದಿದೆ ಎಂದು ಹೇಳಲಾಗುತ್ತಿದೆ. ಹರಿದ ಬಾಲೆನ್ಸಿಯಾಗ
ಶೂಗಳ ಬೆಲೆ 1,43,000 ಆಗಿದೆ. ಹರಿದ ಬೂಟುಗಳು ಪ್ರಪಂಚದಾದ್ಯಂತ ಮುಂಗಡ-ಬುಕ್ ಮಾಡುವ ಅವಕಾಶವಿದೆ.

ಒಂದು ವೇಳೆ 1.43 ಲಕ್ಷ ಮೌಲ್ಯದ ಹರಿದ ಬೂಟುಗಳನ್ನು ಖರೀದಿಸಲು ಬಯಸುವಿರಾದರೆ, ಬಾಲೆನ್ಸಿಯಾಗ ಸ್ಪೀಕರ್ಸ್
ಸೈಟ್‌ಗೆ ಹೋಗಿ ನಂತರ ಬುಕ್ಕಿಂಗ್ ಮಾಡಬಹುದಾಗಿದೆ.

Advertisement
