Home » ‘ರಾಹುಲ್ ಗಾಂಧಿ’ ನನಗೆ ರೋಲ್ ಮಾಡೆಲ್ ಅಂದಿದಕ್ಕೆ ₹40 ಲಕ್ಷ ಪ್ಯಾಕೇಜ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!

‘ರಾಹುಲ್ ಗಾಂಧಿ’ ನನಗೆ ರೋಲ್ ಮಾಡೆಲ್ ಅಂದಿದಕ್ಕೆ ₹40 ಲಕ್ಷ ಪ್ಯಾಕೇಜ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!

0 comments

ಮದುವೆ ನಿಶ್ಚಯಿಸುವಾಗ ಜಾತಿ, ಜಾತಕ ಮತ್ತು ಹುಡುಗನ ಆದಾಯವನ್ನು ಗಮನಿಸುವುದು ಸಾಮಾನ್ಯ. ಆದರೆ ಇಂದಿನ ಯುವ ಜನತೆ ಹೊಸ ಹೊಸ ವಿಚಾರಗಳನ್ನು ಗಮನಿಸುತ್ತಾರೆ. ಅದರಲ್ಲೂ ಇಂದು ರಾಜಕೀಯ ಸಿದ್ಧಾಂತಗಳು ಸಹ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಇಲ್ಲೊಂದು ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ತಾನು ಮದುವೆಯಾಗುವ ಹುಡುಗನಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ‘ರೋಲ್ ಮಾಡೆಲ್’ ಎಂಬ ಒಂದೇ ಕಾರಣಕ್ಕೆ ಯುವತಿಯೊಬ್ಬಳು, ವರ್ಷಕ್ಕೆ 40 ಲಕ್ಷ ರೂಪಾಯಿ ದುಡಿಯುವ, ಸುಂದರವಾಗಿದ್ದ ವರನನ್ನು ತಿರಸ್ಕರಿಸಿದ್ದಾಳೆ. ಈ ಕುರಿತು ಸ್ವತಃ ಆರೂಹಿ ರೆಡ್ಡಿ ಎಂಬ ಯುವತಿಯೇ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಬರೆದುಕೊಂಡಿರುವ ಯುವತಿ ಇತ್ತೀಚೆಗೆ ನನಗೆ ಮದುವೆಯ ಪ್ರಸ್ತಾಪ ಬಂದಿತು. ಆ ವ್ಯಕ್ತಿ ಸುಂದರವಾಗಿದ್ದನು ಮತ್ತು ವರ್ಷಕ್ಕೆ ₹40 ಲಕ್ಷ ರೂಪಾಯಿ ಆಕರ್ಷಕ ಪ್ಯಾಕೇಜ್ ಹೊಂದಿದ್ದನು. ಅಲ್ಲದೆ ಒಳ್ಳೆಯ ಕುಟುಂಬದಿಂದ ಬಂದವನು. ಆದರೆ, ಕೇವಲ ಒಂದೇ ಒಂದು ಕಾರಣಕ್ಕಾಗಿ ನಾನು ಆತನನ್ನು ರಿಜೆಕ್ಟ್ ಮಾಡಿದೆ. ಅದೇನೆಂದರೆ, ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿದಾಗ, ಆತ ರಾಹುಲ್ ಗಾಂಧಿಯನ್ನು ತನ್ನ ರೋಲ್ ಮಾಡೆಲ್ ಎಂದು ಹಾಕಿಕೊಂಡಿದ್ದ. ಸತತವಾಗಿ ಸೋಲುವ ವ್ಯಕ್ತಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವವರ ಐಕ್ಯೂ (IQ) ಮಟ್ಟ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಅಂತಹವರು ತಮ್ಮ ಮಕ್ಕಳಿಗೆ ಗುಲಾಮಗಿರಿ, ದೇಶವಿರೋಧಿ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನು ಬಿಟ್ಟು ಇನ್ನೇನು ಕಲಿಸಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾಳೆ.

ಮುಂದುವರಿದು, ‘ನನ್ನ ಪಾಲಿಗೆ ಹಣ, ಆಕರ್ಷಕ ರೂಪ ಅಥವಾ ದೊಡ್ಡ ವೃತ್ತಿಜೀವನಕ್ಕಿಂತ ನನ್ನ ದೇಶ ಮತ್ತು ನನ್ನ ಸನಾತನ ಧರ್ಮವೇ ಮುಖ್ಯ. ಒಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ ಆಗಿ, ಇಂಥವರನ್ನು ನನ್ನ ಜೀವನ ಸಂಗಾತಿಯಾಗಿ ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

You may also like