# Covid-19: ರಾಜ್ಯದಲ್ಲಿ ಕೋವಿಡ್ ಹೆಚ್ಚಳ- ಇಂತವರು ತಪ್ಪದೇ ಈ ಇಂಜೆಕ್ಷನ್ ಹಾಕಿಸಿಕೊಳ್ಳಿ !!

- Link: https://hosakannada.com/health/covid-19-cases-get-this-injection-if-there-is-an-increase-in-covid-in-the-state-latest-news/
- Published: 2024-01-04T13:33:31+00:00
- Author: ಕೆ. ಎಸ್. ರೂಪಾ

Covid-19: ದೇಶಾದ್ಯಂತ ಕೋವಿಡ್ 4ನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿಯೂ ಕೂಡ ಪ್ರಕರಣಗಳ
ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಇಂತವರು ಕೋರ್ಬಿವ್ಯಾಕ್ಸ್(Corbiwax) ಲಸಿಕೆಯನ್ನು ಪಡೆಯಬೇಕೆಂದು
ಸರ್ಕಾರ ಸೂಚನೆ ನೀಡಿದೆ.

Sponsored

ಹೌದು, ಕೋವಿಡ್(Covid-19) ಹೆಚ್ಚಳ ಭೀತಿಯಿಂದ ಸರ್ಕಾರ ಕೆಲವು ನಿಯಮಗಳನ್ನು ಈಗಾಗಲೇ ಜಾರಿಗೊಳಿಸಿದೆ.
60 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಮಾಸ್ಕ್ ಕಡ್ಡಾಯ ಮಾಡಿ ಸರ್ಕಾರ
ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಪಡೆಯಬೇಕೆಂದು ಸರ್ಕಾರ ಸೂಚನೆ ನೀಡಿದೆ.

Advertisement

Advertisement

**ಯಾರು ಈ ಲಸಿಕೆ ಪಡೆಯಬೇಕು?**

18 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ
ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು
ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಪಡೆಯುಬಹುದು.

**ಇದನ್ನು ಓದಿ: [Vastu Tips For Floor:ಮನೆಯಲ್ಲಿ ಟೈಲ್ಸ್ ಹಾಕುವ ಮುನ್ನ, ವಾಸ್ತು ಶಾಸ್ತ್ರದ ಈ ಸಂಗತಿಗಳನ್ನು ತಿಳಿದುಕೊಳ್ಳಿ!!](https://hosakannada.com/2024/01/04/vastu-tips-for-home-marble-floor-latest-news/)**

**ಸದ್ಯ ಎಲ್ಲಿ ಸಿಗುತ್ತೆ ಈ ಲಸಿಕೆ?**

ಮಡಿಕೇರಿ ಮತ್ತು ತಾಲ್ಲೂಕು ಆಸ್ಪತ್ರೆ, ಸೋಮವಾರಪೇಟೆ ಮತ್ತು ವಿರಾಜಪೇಟೆಗೆ ಭೇಟಿ ನೀಡಿ ಜನವರಿ, 04
ರಿಂದ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಹಾಗೂ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಅವರು ತಿಳಿಸಿದ್ದಾರೆ.

Advertisement
