# Kabab 238, Viral Recipe: 1784 ಇಸವಿಯ, ಬಂಗಾಳದ ಮೊದಲ ಗವರ್ನರ್ ಕಾಲದ 238 ವರ್ಷ ಹಳೆಯ ಕಬಾಬ್​​ ರೆಸಿಪಿ ವೈರಲ್​​ !

- Link: https://hosakannada.com/food/kabab-238-viral-recipe/
- Published: 2023-02-26T13:14:45+00:00
- Author: ಹೊಸಕನ್ನಡ ನ್ಯೂಸ್

Kabab 238, Viral Recipe: ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್. ಇದು ನಾನು 
ಇತಿಹಾಸದಲ್ಲಿ ಓದಿರುವ ವಿಷ್ಯ. ವಾರೆನ್ ಹೇಸ್ಟಿಂಗ್ಸ್ (warren hastings) ಅವರ ಖಾಸಗಿ ಡೈರಿಯಿಂದ
ಕಬಾಬ್ (Kabab) ರಿಸಿಪಿ ಒಂದು ಹೊರಬಂದು ಕುತೂಹಲ ಮೂಡಿಸಿದೆ. ಈ ಪಾಕವಿಧಾನ ಹಳೆಯ ಫೋಟೋವನ್ನು ಇತ್ತೀಚೆಗೆ
ಬರಹಗಾರರ ಇರಾ ಮುಖೋಟಿ ಎನ್ನುವವರು ತನ್ನ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಸುದ್ದಿ
ವೈರಲ್ ಆಗಿದ್ದು ಕಬಾಬ್ ನಷ್ಟೇ ಫೇಮಸ್ (Kabab 238, Viral Recipe)ಆಗಿ ಬಿಕರಿಯಾಗುತ್ತಿದೆ.

Sponsored

ಕ್ರಿಸ್ತಶಕ 1772 – 1784 ಸುಮಾರಿಗೆ ಬಂಗಾಳದ ಮೊದಲ ಗವರ್ನರ್ ಆದವರು ಜನರಲ್ ವಾರೆನ್ ಹೇಸ್ಟಿಂಗ್ಸ್.
ಅವರ 1784 ಖಾಸಗಿ ಡೈರಿಯಿಂದ ಕಬಾಬ್ ಪಾಕವಿಧಾನ (Kebab Recipe) ದ ಹಳೆಯ ಫೋಟೋವನ್ನು ಇತ್ತೀಚೆಗೆ,
ಬರಹಗಾರದ ಇರಾ ಮುಖೋಟಿ (Ira Mukhoty) ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಕಾಲದಿಂದಲೂ
ಭಾರತೀಯ ಪಾಕ ಪದ್ದತಿಯಲ್ಲಿ ಕಬಾಬ್​​ಗೆ ಹಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ.
ಇರಾ ಮುಖೋಟಿ ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ. ಅಂದರೆ ಇದು 238
ವರ್ಷಗಳ ಹಿಂದಿನ ವಿಶೇಷ ರಿಸಿಪಿ.

Advertisement

Advertisement

ಈ ಫೋಟೋದಲ್ಲಿ ಕಾಣಿಸುವಂತೆ ಇಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ 
ಹಲವು ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಜೊತೆಗೆ, ಅದರ ಕೆಳಗೆ ಕಬಾಬು ಮಾಡುವ ಪಾಕವಿಧಾನವನ್ನು
ಕೂಡ ಬರೆಯಲಾಗಿದೆ. ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು 5 ಅಥವಾ 6 ಗ್ಲಾಸಿನಷ್ಟು ನೀರಿನಲ್ಲಿ ಚೆನ್ನಾಗಿ
ಮಿಶ್ರ ಮಾಡಬೇಕು. ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲ ವಸ್ತುಗಳನ್ನು ಕಲ್ಲಿನ
ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ. ಜತೆಗೆ ಕಾಯಿಸುವಾಗ ಅವು
ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.

> Warren Hasting’s kebab recipe
> Even as charges for corruption were about to be framed against him, Hastings was
> enjoying Nawab Asaf’s company at Lucknow in July 1784, learning how to make kebabs
> British library, Hastings’ private diary [pic.twitter.com/fqCtch2x1L](https://t.co/fqCtch2x1L)
> — Ira Mukhoty (@mukhoty) [February 23, 2023](https://twitter.com/mukhoty/status/1628775846910599171?ref_src=twsrc%5Etfw)

ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡ ನಂತರ, 213 ರಿ- ಟ್ವೀಟ್, 1,57,000 ವೀಕ್ಷಣೆಗಳನ್ನು ಮತ್ತು 
1375 ಲೈಕ್ಸ್​​ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಟಿರಿಸಿಪಿ ನೋಡಿದ ಇಂಟರ್ನೆಟ್ ಬಳಕೆದಾರರು
ಮತ್ತು ಅಡುಗೆ ಪರಿಣಿತರು ಪುಳಕಿತರಾಗಿದ್ದರೆ. ಹಾಗಾಗಿ ಸಾಕಷ್ಟು ಆಸಕ್ತಿ ಹೊಂದಿ ಕಾಮೆಂಟ್​ ಮೂಲಕ 
ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಹೇಳಿದ ಪಾಕವಿಧಾನ ನಾವೀಗ ಕಾಯಿಸುವ ಕಬಾಬುವಿಗಿಂತ ವಿಭಿನ್ನವಾಗಿದೆ.
ಆದುದರಿಂದ ಅದು ಎಲ್ಲರ ಗಮನ ಸೆಳೆದಿದೆ. ಹೊಸರುಚಿಯ ಹುಡುಕಾಟದಲ್ಲಿರುವ ಪಾಕ ಪ್ರವೀಣ ಪ್ರವೀಣೆಯರು 
ಅಡುಗೆ ಮನೆ ಸೇರಿದ್ದು ಕಬಾಬ್ -238 ಎಂಬ ಚಿಕನ್ – 65 ಯಷ್ಟೇ ರುಚಿಕರ ಖಾದ್ಯ ತಯಾರಿಕೆಗೆ ತೊಡಗಿದ್ದಾರೆ.
ಯಾರಿಗೆ ಗೊತ್ತು, ಹಳೆಯ ಈ ಪಾಕವಿಧಾನ ಹೊಸ ರುಚಿಯನ್ನು ಹುಟ್ಟು ಹಾಕಿದರೂ ಹಾಕೀತು.

Advertisement
