# Health Tips: ಈ ಐದು ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ!!

- Link: https://hosakannada.com/food/health-tips-avoid-reheating-these-five-foods/
- Published: 2023-11-06T10:32:49+00:00
- Author: Mallika

Avoid Reheating Food: ಅಡುಗೆ ಮಾಡಿ ಅದನ್ನು ಬಿಸಿಯಾಗಿ ತಿನ್ನಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ
ಅದನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ನಂತರ ಆಹಾರವನ್ನು ಬಿಸಿ ಮಾಡಿ ತಿನ್ನುವ ರೂಢಿ ಕೆಲವರು ಇಟ್ಕೊಂಡಿರುತ್ತಾರೆ.
ಆದರೆ ಈ ರೀತಿಯಾಗಿ ಆಹಾರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಆಹಾರಗಳು ಯಾವುದು? ಬನ್ನಿ
ತಿಳಿಯೋಣ.

Sponsored

**ಪಾಲಕ್‌ ಸೊಪ್ಪಿನಿಂದ ಮಾಡಿದ ಆಹಾರ: **ಇವುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಇದರಲ್ಲಿ
ನೈಟ್ರೇಟ್‌ ಇರುವುದರಿಂದ ನೈಟ್ರೋಸಮೈನ್‌ ಆಗಿ ಪರಿವರ್ತನೆಯಾಗುವುದು. ನೈಟ್ರೋಸಮೈನ್‌ ಒಂದು ಕ್ಯಾನ್ಸರ್‌
ಕಾರಕವಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆ, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌
ಅಪಾಯವನ್ನು ಹೆಚ್ಚಿಸಬಹುದು.

Advertisement

Advertisement

**ಆಲೂಗಡ್ಡೆಯಿಂದ ಮಾಡಿದ ಆಹಾರ:** ಆಲೂಗಡ್ಡೆ ಪಿಷ್ಟವನ್ನು ಹೊಂದಿದೆ. ಹಾಗಾಗಿ ಮತ್ತೆ ಮತ್ತೆ ಬಿಸಿ
ಮಾಡಿದಾಗ ಇದು ಒಡೆಯುತ್ತದೆ, ಹಾಗೂ ವಿಷವಾಗಿ ಉತ್ಪಾದನೆಯಾಗುತ್ತದೆ. ಇದರಿಂದ ಹೊಟ್ಟೆನೋವು, ವಾಕರಿಗೆ,
ವಾಂತಿ ಬರುವುದಕ್ಕೆ ಕಾರಣವಾಗುತ್ತದೆ.

**ಅಕ್ಕಿಯಿಂದ ಮಾಡಿದ ಆಹಾರ: **ಅನೇಕರಲ್ಲಿ ಮನೆಗಳಲ್ಲಿ ಮಧ್ಯಾಹ್ನ, ರಾತ್ರಿ ಊಟಕ್ಕೆ ಅನ್ನವನ್ನು 
ಒಂದೇ ಬಾರಿ ಮಾಡಲಾಗುತ್ತದೆ. ಆದರೆ ಫುಟ್‌ ಸೇಫ್ಟಿ ಏಜೆನ್ಸಿ ಹೇಳಿರುವ ಪ್ರಕಾರ ತಣ್ಣಗಾದ ಅನ್ನವನ್ನು
ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ.

**ಚಿಕನ್‌ನಿಂದ ಮಾಡಿದ ಆಹಾರ: **ಇವುಗಳನ್ನು ಕೂಡಾ ಮತ್ತೆ ಮತ್ತೆ ಬಿಸಿ ಮಾಡುವುದರಿಂ ಪ್ರೋಟೀನ್‌ 
ಒಡೆದು ವಿಭಿನ್ನ ರೂಪ ಪಡೆಯುತ್ತದೆ. ಬೇಯಿಸಿದ ಚಿಕನ್‌ ಮೈಕ್ರೋವೇವ್‌ನಲ್ಲಿ ಇಟ್ಟರೆ ಬ್ಯಾಕ್ಯೀರಿಯ
ಮಾಂಸದಲ್ಲಿ ಹರಡುತ್ತದೆ. ಇದು ಆರೋಗ್ಯಕ್ಕೆ ಹಾನಿಯಾಗುತ್ತದೆ.

**ಮೊಟ್ಟೆಗಳಿಂದ ಮಾಡಿದ ಆಹಾರ: **ಇವುಗಳನ್ನು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು
ಉತ್ಪಾದನೆ ಮಾಡುತ್ತದೆ. ಇವು ಫುಡ್‌ ಪಾಯಿಸನ್‌ಗೆ ಕಾರಣವಾಗುತ್ತದೆ. ಅತಿಸಾರ, ಹೊಟ್ಟೆ ನೋವು, ಜ್ವರ
ಕಾಣಿಸಿಕೊಳ್ಳಬಹುದು ಇದರಿಂದ.

 

ಇದನ್ನು ಓದಿ:[ Rice Price Hike:ದೀಪಾವಳಿಗೆ ‘ದುಬಾರಿ’ಯ ಗಿಫ್ಟ್ – ಈ ಆಹಾರ ಪದಾರ್ಥಗಳ ಬೆಲೆಯಲ್ಲಿ ಒಮ್ಮೆಲೆ ಏರಿಕೆ !!](https://hosakannada.com/2023/11/06/deepavali-effect-rice-grain-and-dal-price-hike-latest-news/)

Advertisement
